ಮಾನಸಿಕ ಒತ್ತಡ ನಿರ್ವಹಣೆ ಅತ್ಯಗತ್ಯ- ಡಾ ಆನಂದ್; ಗೃಹರಕ್ಷಕರಿಗೆ ಮಾನಸಿಕ ಆರೋಗ್ಯ ತರಬೇತಿ ಮತ್ತು ಮಾದಕ ದ್ರವ್ಯ ಜಾಗೃತಿ ಕಾರ್ಯಗಾರ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 24. ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ ಮತ್ತು ದ.ಕ ಜಿಲ್ಲಾ ಪೌರರಕ್ಷಣಾ ಪಡೆ ಇದರ ವತಿಯಿಂದ ದ.ಕ ಜಿಲ್ಲಾ ಮಾನಸಿಕ ಆರೋಗ್ಯ ಇಲಾಖೆ ಇದರ ಸಹಕಾರದೊಂದಿಗೆ, ನಗರದ ನೇತ್ರಾವತಿ ಸಭಾಂಗಣದಲ್ಲಿ ಗೃಹರಕ್ಷಕರಿಗೆ ಮಾನಸಿಕ ಆರೋಗ್ಯ ತರಬೇತಿ ಮತ್ತು ಮಾದಕ ದ್ರವ್ಯ ಜಾಗೃತಿ ಕಾರ್ಯಗಾರ ಹಾಗೂ ಉಚಿತ ಮಧುಮೇಹ, ಅಧಿಕ ರಕ್ತದೊತ್ತಡ, ಇಸಿಜಿ, ಕಣ್ಣಿನ ತಪಾಸಣೆಯನ್ನು ಗುರುವಾರದಂದು ಬೆಳಿಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆಸಲಾಯಿತು.

ಈ ಕಾರ್ಯಕ್ರಮದ ಉದ್ಘಾಟನೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‍ ಕಾರ್ಯನಿರ್ವಾಹಣಾಧಿಕಾರಿ ಡಾ|| ಆನಂದ್ ಕೆ, IAS  ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಗೃಹರಕ್ಷಕದಳ ಇಲಾಖೆಯಲ್ಲಿ ಒಂದು ಸಾವಿರ ಸಂಖ್ಯಾ ಬಲವಿದ್ದು, ಬೇರೆ ಬೇರೆ ಇಲಾಖೆಗಳಲ್ಲಿ ಪ್ರಮುಖವಾಗಿ ಸಾರಿಗೆ ಇಲಾಖೆ, ಪೊಲೀಸ್ ಇಲಾಖೆ, ಜೈಲ್ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುವುದು ತುಂಬಾ ಕಷ್ಟ. ಅದನ್ನು ಗುರುತಿಸಬೇಕಾದರೆ ಅದನ್ನು ಒಂದು ತರಬೇತಿ ಮುಖಾಂತರ ಯಾರಿಗೆ ಒತ್ತಡ ಆಗಿರಬಹುದು ಅಥವಾ ನಮಗೆ ಅದು ಬಂದಿದೆಯೋ ಇಲ್ಲವೋ ಎಂದು ಕಂಡುಹಿಡಿಯಲು ಗೊತ್ತಾಗುವುದಿಲ್ಲ. ಯಾವಾಗ ನಾವು ವೈದ್ಯಾಧಿಕಾರಿಗಳ ಬಳಿ ಹೋಗಿ ಕೌನ್ಸಿಲಿಂಗ್ ಅನ್ನು ಯಾವಾಗ ಮಾಡಬೇಕು ಹೇಗೆ ಮಾಡಬೇಕು ಎಂಬ ತಿಳಿವಳಿಕೆ ಇಲ್ಲ ಅಂದರೆ ನಿದ್ರಾಹೀನತೆಯಾಗಿ ಊಟದ ಸಮಸ್ಯೆ, ತೂಕ ಕಡಿಮೆ ಆಗುತ್ತದೆ, ಜನರ ಜೊತೆ ಸಾಮಾಜಿಕವಾಗಿ ಹೊಂದಿಕೊಂಡು ಹೋಗುವುದು ಕಡಿಮೆ ಆಗುತ್ತದೆ ಈ ರೀತಿಯ ಸಾಕಷ್ಟು ಪರಿಣಾಮಗಳು ಮಾನಸಿಕ ರೋಗವಾಗಿ ದೊಡ್ಡ ಮಟ್ಟದಲ್ಲಿ ಆಗುವ ಸಾಧ್ಯತೆ ಇರುತ್ತದೆ. ಇದು ಬರದಂತೆ ಹೇಗೆ ನೋಡಿಕೊಳ್ಳುವುದು, ಯಾವ ರೀತಿ ನಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಎಂಬುದರ ಬಗ್ಗೆ ತಿಳಿಸಿದರು.

Also Read  ಕಡಬ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸಿಯಾಬುದ್ದೀನ್ ನಾಮಪತ್ರ ಸಲ್ಲಿಕೆ

ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿ, ಡಾ|| ಕಿಶೋರ್ ಕುಮಾರ್ ಮಾತನಾಡಿ, ಗೃಹರಕ್ಷಕರಿಗೆ ಮಾನಸಿಕ ಆರೋಗ್ಯ ತರಬೇತಿ ಮತ್ತು ಮಾದಕ ದ್ರವ್ಯದ ತರಬೇತಿ ಕಾರ್ಯಾಗಾರ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಯಿತು. ಗೃಹರಕ್ಷಕರು ತುಂಬಾ ವರ್ಷಗಳಿಂದ ಬೇರೆ ಬೇರೆ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ, ಸಹಜವಾಗಿ ಕೆಲಸದ ಒತ್ತಡ ಅಥವಾ ವಯಕ್ತಿಕ  ಜೀವನದ ಒತ್ತಡ ಇರಬಹುದು ಇದನ್ನು ನಿರ್ವಹಣೆ ಮಾಡುವಂತಹದು ಜೊತೆಗೆ ಇದರೊಂದಿಗೆ ಬರುವ ಕಾಯಿಲೆಗಳಾದ ಮದುಮೇಹ, ರಕ್ತದೊತ್ತಡ, ಮಾನಸಿಕ ಉದ್ವಿಘ್ನತೆ, ಇವೆಲ್ಲವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಈ ತರಬೇತಿ ಪ್ರಮುಖ ಪಾತ್ರವಹಿಸುತ್ತದೆ ಇದರ ಸದುಪಯೋಗವನ್ನು ಎಲ್ಲರೂ ಪಡೆಯಬೇಕು ಇದರ ಜೊತೆಗೆ ಮಾದಕ ದ್ರವ್ಯ ಜಾಗೃತಿ ಕಾರ್ಯಗಾರದ ಮಾಹಿತಿಯನ್ನೂ ನೀಡುತ್ತೇವೆ. ಮಾದಕ ದ್ರವ್ಯ ಮತ್ತು ಮಾದಕ ವಸ್ತುಗಳಿಗೆ ಯಾರೆಲ್ಲ ಒಳಗಾಗಿರುತ್ತಾರೆ ಅಂತವರನ್ನು ಗುರುತಿಸಿ ಅವರಿಗೆ ಉಚಿತವಾದ ಚಿಕಿತ್ಸೆ ನೀಡಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತಂದು ನಾವು ಅವರನ್ನು ಉತ್ತಮ ಪ್ರಜೆಗಳನ್ನಾಗಿ ಮಾಡುವಂತ ದೃಷ್ಟಿಯಿಂದ ಈ ಮಾದಕ ದ್ರವ್ಯ ಜಾಗೃತಿ ಕಾರ್ಯಗಾರ ನಡೆಯುತ್ತಿದೆ. ಎಲ್ಲರೂ ಈ ತರಬೇತಿ ಕಾರ್ಯಗಾರದ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ನುಡಿದರು.

Also Read  ದಸರಾ ಹಬ್ಬದ ಪ್ರಯುಕ್ತ ಚರ್ಮದ ವಸ್ತುಗಳ ಮೇಲೆ 20% ರಿಯಾಯಿತಿ

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಮನೋರೋಗ ತಜ್ಞರಾದ ಡಾ|| ಸುಪ್ರಿತಾ, ಅವರು ಮಾನಸಿಕ ಆರೋಗ್ಯದ ಬಗ್ಗೆ ತರಬೇತಿ ನೀಡಿದರು. ಫಾದರ್ ಮುಲ್ಲರ್ಸ್ ಆಸ್ಪತ್ರೆಯ ಮನೋರೋಗ ತಜ್ಞರಾದ ಡಾ|| ರಾಹುಲ್ ರಾವ್ ಅವರು  ಆತ್ಮಹತ್ಯೆ ತಡೆಗಟ್ಟುವಿಕೆಯ ಬಗ್ಗೆ ತರಬೇತಿ ನೀಡಿದರು ಹಾಗೂ ಮನಶಾಂತಿ ಚಿಕಿತ್ಸಾಲಯದ ಮಾನಸಿಕ ಆರೋಗ್ಯದ ವೈದ್ಯರಾದ ಡಾ|| ರಮೀಳಾ ಶೇಖರ್ ಅವರು ಒತ್ತಡ ನಿರ್ವಹಣೆಯ ಬಗ್ಗೆ ತರಬೇತಿ ನೀಡಿದರು. ಈ ಕಾರ್ಯಕ್ರಮದಲ್ಲಿ ಡಾ|| ಪದ್ಮನಾಭ ಕಾಮತ್, ಹೃದಯ ತಜ್ಞರು, ಡಾ|| ಸುದರ್ಶನ್ ಸಿ.ಎಂ, ಜಿಲ್ಲಾ ಲೆಪ್ರಸಿ ಅಧಿಕಾರಿ ಮತ್ತು ಮಾನಸಿಕ ಆರೋಗ್ಯ ಅಧಿಕಾರಿಗಳು ಗೌರವ ಉಪಸ್ಥಿತರಿದ್ದರು.  ಬೆಳ್ತಂಗಡಿ ಘಟಕದ ಪ್ರಭಾರ ಘಟಕಾಧಿಕಾರಿ ಶ್ರೀ ಜಯಾನಂದ ಅವರು ಸ್ವಾಗತ ಭಾಷಣ ಮಾಡಿದರು. ತಾಲೂಕು ಆರೋಗ್ಯ ಅಧಿಕಾರಿ ಡಾ|| ಸುಜಯ್ ಭಂಡಾರಿ ಅವರು ಈ ಕಾರ್ಯಾಗಾರದ ಉಸ್ತುವಾರಿಯನ್ನು ವಹಿಸಿದ್ದರು. ಜಿಲ್ಲಾ ಉಪಸಮಾದೇಷ್ಟರಾದ ಶ್ರೀ ರಮೇಶ್ ಅವರು ವಂದನಾರ್ಪಣೆ ಮಾಡಿದರು. ಮಂಗಳಾ ಪ್ಯಾರಾಮೆಡಿಕಲ್ ಕಾಲೇಜು ಸಿಬ್ಬಂದಿಗಳು ಕಣ್ಣು ಪರೀಕ್ಷೆ ನಡೆಸಿಕೊಟ್ಟರು. 10 ಮಂದಿ ಸರ್ಕಾರಿ ಶುಶ್ರೂಷಕಿಯರು ಈ ತರಬೇತಿಯಲ್ಲಿ ಉಪಸ್ಥಿತರಿದ್ದರು ಹಾಗೂ ಗೃಹರಕ್ಷಕರಿಗೆ ಉಚಿತ ಮಧುಮೇಹ, ರಕ್ತದೊತ್ತಡ, ಕಣ್ಣಿನ ತಪಾಸಣೆಗಳನ್ನು ಮಾಡಿದರು. ಕಾರ್ಯಗಾರದಲ್ಲಿ 15 ಘಟಕಗಳಿಂದ ಸುಮಾರು 150 ಮಂದಿ ಗೃಹರಕ್ಷಕ ಗೃಹರಕ್ಷಕಿಯರು ಭಾಗವಹಿಸಿದ್ದರು.

Also Read  ಲಾರಿ - ಬೈಕ್ ನಡುವೆ ಢಿಕ್ಕಿ ➤ ಖ್ಯಾತ ಜಾದೂಗಾರ ಮೃತ್ಯು

error: Content is protected !!
Scroll to Top