ನೆಕ್ಕರೆ ಅಂಗನವಾಡಿ ಕಾರ್ಯಕರ್ತೆ ವರ್ಗಾವಣೆ- ಬೀಳ್ಕೊಡುಗೆ

(ನ್ಯೂಸ್ ಕಡಬ) newskadaba.com ಕಡಬ, ಆ. 24. ಆಲಂಕಾರು ಗ್ರಾಮದ ನೆಕ್ಕರೆ ಅಂಗನವಾಡಿ ಕೇಂದ್ರದಲ್ಲಿ 9 ವರ್ಷ ಕಾರ್ಯಕರ್ತೆಯಾಗಿ ಸೇವೆಸಲ್ಲಿಸಿ ಇದೀಗ ಕಡಬ ಪಿಜಕ್ಕಳ ಅಂಗನವಾಡಿ ಕೇಂದ್ರಕ್ಕೆ ವರ್ಗಾವಣೆಯಾಗಿರುವ ಶ್ರೀಮತಿ ನಯನಾಕ್ಷಿ ಅವರನ್ನು ನೆಕ್ಕರೆ ಅಂಗನವಾಡಿ ಕೇಂದ್ರದ ಬಾಲವಿಕಾಸ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು, ಮಕ್ಕಳ ಪೋಷಕರು ಮತ್ತು ಸ್ತ್ರೀಶಕ್ತಿ ಗುಂಪಿನ ಸದಸ್ಯರ ಸಹಯೋಗದಿಂದ ಬೀಳ್ಕೊಡುಗೆ ಸಮಾರಂಭ ನಡೆಯಿತು.

ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಬಾಲವಿಕಾಸ ಸಮಿತಿ ಅನಿತಾ ಇವರು ವಹಿಸಿದ್ದರು ಮತ್ತು ಅಲಂಕಾರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ರವಿ ಪೂಜಾರಿ ಅವರು ದೀಪಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು. ಅವರ ಜೊತೆಗೆ ಅಥಿತಿಯಾಗಿ ಮಾಜಿ ಅಧ್ಯಕ್ಷರು ಸದಾನಂದ ಆಚಾರ್ಯ, ಪುತ್ತೂರು ಶಿಶು ಅಭಿವೃದ್ದಿ ಯೋಜನೆಯ ಆಲಂಕಾರು ವಲಯದ ಹಿರಿಯ ಮೇಲ್ವಿಚಾರಕಿ ಶ್ರೀಮತಿ ವಾಣಿಶ್ರೀ, ಆಶಾ ಕಾರ್ಯಕರ್ತೆ, ಪೋಷಕರಾದ ಸಿದ್ದಪ್ಪ, ಚೆರಿಯ ಮೋನು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವರ್ಗಾವಣೆಯಾದ ನಯನಾಕ್ಷಿಯವರಿಗೆ ಅಧ್ಯಕ್ಷರು ಮತ್ತು ಅಥಿತಿಗಳು ಶಾಲು ಹೊದಿಸಿ ಕಂಚಿನ ತಟ್ಟೆಯೊಂದಿಗೆ ಶೀಲ್ಡ್, ಸೀರೆ ಹಾಗೂ ಫಲಪುಷ್ಪ ನೀಡಿ ಸನ್ಮಾನಿಸಿದರು. ಇವರು ವೃತ್ತಿ ಜೀವನಕ್ಕೆ ಶುಭಹಾರೈಸಿದರು. ಈ ಕಾರ್ಯಕ್ರಮದಲ್ಲಿ ನಳಿನಿ ಮತ್ತು ವಿಶಾಲಾಕ್ಷಿ.ಯಂ. ಇವರು ಪ್ರಾಥನೆಯೊಂದಿಗೆ ಪ್ರಾರಂಭಿಸಿ ಶ್ರೀಮತಿ ನಳಿನಿ ಕಾರ್ಯಕರ್ತೆ ನಿರೂಪಿಸಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಪೋಷಕರು, ಸ್ತ್ರೀ ಶಕ್ತಿ ಸಂಘದ ಸದಸ್ಯರು ಮತ್ತು ಅಂಗನವಾಡಿ ಕೇಂದ್ರದ ಮಕ್ಕಳು ಊರಿನ ಅಭಿಮಾನಿಗಳು ಉಪಸ್ಥಿತರಿದ್ದರು.

Also Read  ಸೆಪ್ಟಂಬರ್ 24 - ರಾಷ್ಟ್ರೀಯ ಸೇವಾ ಯೋಜನಾ ದಿನ

error: Content is protected !!
Scroll to Top