ಬೆಳ್ಳಾರೆ: ಐತಿಹಾಸಿಕ ಬಂಗ್ಲೆಗುಡ್ಡೆಯಲ್ಲಿ ಬುಶ್ರಾ ವಿದ್ಯಾಸಂಸ್ಥೆ ಕಾವು ಹಾಗೂ ಸ್ನೇಹಿತರ ಕಲಾ ಸಂಘದ ವತಿಯಿಂದ ಅಮರಕ್ರಾಂತಿಯ ನೆನಪು ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಆ. 24. ಬುಶ್ರಾ ಆಂಗ್ಲ ಮಾಧ್ಯಮ ಶಾಲೆ ಕಾವು ಮತ್ತು ಸ್ನೇಹಿತರ ಕಲಾ ಸಂಘ(ರಿ.) ಬೆಳ್ಳಾರೆ ಇವುಗಳ ಸಂಯುಕ್ತ ಆಶ್ರಯದಲ್ಲಿ 1837ರಲ್ಲಿ ನಡೆದ ಅಮರ ಸುಳ್ಯದ ರೈತಾಪಿ ಜನರು ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಹೋರಾಟವನ್ನು ನೆನಪಿಸುವ ಅಮರ ಕ್ರಾಂತಿಯ ನೆನಪು ಕಾರ್ಯಕ್ರಮವು ಬುಧವಾರದಂದು ಸ್ವಾತಂತ್ರ್ಯ ಹೋರಾಟದ ಐತಿಹಾಸಿಕ ಸ್ಥಳ ಬಂಗ್ಲೆಗುಡ್ಡೆ ಬೆಳ್ಳಾರೆಯಲ್ಲಿ ನಡೆಯಿತು.


ಐತಿಹಾಸಿಕ ಸ್ಥಳ ಮತ್ತು ಮುಂದಿನ ಯೋಜನೆ ಬಗ್ಗೆ ಬೆಳ್ಳಾರೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಚಂದ್ರಶೇಖರ ಪನ್ನೆ ಮಾಹಿತಿ ನೀಡಿದರು. ಬುಶ್ರಾ ಆಂಗ್ಲ ಮಾಧ್ಯಮ ಶಾಲೆಯ ಶೈಕ್ಷಣಿಕ ಸಲಹೆಗಾರರಾದ ಕೃಷ್ಣಪ್ರಸಾದ್, ಯುವಜನ ಸಂಯುಕ್ತ ಮಂಡಳಿಯ ಪ್ರಧಾನ ಕಾರ್ಯದರ್ಶಿ ಸಂಜಯ್ ನೆಟ್ಟಾರು ಉಪಸ್ಥಿತರಿದ್ದರು. ಸ್ನೇಹಿತರ ಕಲಾಸಂಘದ ಅಧ್ಯಕ್ಷರಾದ ವಸಂತ ಉಲ್ಲಾಸ್ ಅಧ್ಯಕ್ಷತೆ ವಹಿಸಿದ್ದರು. ಬುಶ್ರಾ ವಿದ್ಯಾಸಂಸ್ಥೆಯ ಸಿಬ್ಬಂದಿ ರಶೀದ್ ಬೆಳ್ಳಾರೆ ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ಚಂದ್ರಶೇಖರ್ ಹಾಗೂ ಬುಶ್ರಾ ಸಂಸ್ಥೆಯ ಬೋಧಕೇತರ ಸಿಬ್ಬಂದಿಗಳು ಸಹಕರಿಸಿದರು. ಬುಶ್ರಾ ವಿದ್ಯಾಸಂಸ್ಥೆಯ 40 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

error: Content is protected !!

Join the Group

Join WhatsApp Group