ಅನಾರೋಗ್ಯದಿಂದ ಬಳಲುತ್ತಿದ್ದ ಯುವಕ ಮೃತ್ಯು

(ನ್ಯೂಸ್ ಕಡಬ) newskadaba.com ಕಾರ್ಕಳ, . 23. ಅನಾರೋಗ್ಯದಿಂದ ಬಳಲುತ್ತಿದ್ದ ಯುವಕ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಶಿರ್ಲಾಲು ಗ್ರಾಮದಿಂದ ವರದಿಯಾಗಿದೆ.

ಮೃತಪಟ್ಟ ಯುವಕನನ್ನು ಶಿರ್ಲಾಲು ಗ್ರಾಮದ ಹಾಡಿಯಂಗಡಿ ನಿವಾಸಿ ರಜನೀಶ್ (18) ಎಂದು ಗುರುತಿಸಲಾಗಿದೆ. ರಜನೀಶ ಕಳೆದ ಹಲವು ಸಮಯದಿಂದ ಹರ್ನಿಯಾ ಸಮಸ್ಯೆಯಿಂದ ಬಳಲುತ್ತಿದ್ದು, 3 ವಾರದ ಹಿಂದೆ ಉಡುಪಿಯ ಸರಕಾರಿ ಆಸ್ವತ್ರೆಗೆ ದಾಖಲಾಗಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಮನೆಗೆ ಮರಳಿದ್ದರು. ಇದಾದ 10 ದಿನಗಳ ನಂತರ ಶಸ್ತ್ರ ಚಿಕಿತ್ಸೆಯ ಹೊಲಿಗೆ ತೆಗೆಯಿಸಿ, ವಾಂತಿ ಹಾಗೂ ಜ್ವರಕ್ಕೆ ಔಷಧಿ ಪಡೆದುಕೊಂಡು ಬಂದಿದ್ದರು ಎನ್ನಲಾಗಿದೆ.

Also Read  ಕೋರೆ ಮಾಲಿಕರ ಮೇಲೆ ರೌಡಿಗಳ ದಾಳಿ ►ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದ ರೌಡಿ ಬ್ಲೇಡ್ ಸಾದಿಕ್

error: Content is protected !!
Scroll to Top