(ನ್ಯೂಸ್ ಕಡಬ) newskadaba.com ಮಂಗಳೂರು,ಆ. 23. ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ ಮತ್ತು ಪೌರರಕ್ಷಣಾ ಪಡೆ ಇದರ ವತಿಯಿಂದ, ದ.ಕ ಜಿಲ್ಲಾ ಮಾನಸಿಕ ಆರೋಗ್ಯ ಇಲಾಖೆ ಇದರ ಸಹಕಾರದೊಂದಿಗೆ ಆ. 24ರ ಗುರುವಾರದಂದು ನಗರದ ನೇತ್ರಾವತಿ ಸಭಾಂಗಣದಲ್ಲಿ ಗೃಹರಕ್ಷಕರಿಗೆ ಒಂದು ದಿನದ ಮಾನಸಿಕ ಆರೋಗ್ಯ ತರಬೇತಿ ಮತ್ತು ಮಾದಕ ದ್ರವ್ಯ ಜಾಗೃತಿ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಕಾರ್ಯಗಾರ ಹಾಗೂ ಉಚಿತ ಮಧುಮೇಹ, ಇಸಿಜಿ, ಅಧಿಕ ರಕ್ತದೊತ್ತಡ ತಪಾಸಣಾ, ಕಣ್ಣಿನ ತಪಾಸಣೆ ಶಿಬಿರವನ್ನು ನಡೆಸಲಾಗುವುದು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ದ.ಕ ಜಿಲ್ಲಾ ಪಂಚಾಯತ್ ನ ಕಾರ್ಯನಿರ್ವಾಹಣಾಧಿಕಾರಿ ಡಾ|| ಆನಂದ್ ಕೆ, IAS ಅವರು ನಡೆಸಿಕೊಡಲಿದ್ದಾರೆ. ಹೃದಯ ತಜ್ಞರಾದ ಡಾ|| ಪದ್ಮನಾಭ ಕಾಮತ್, ಜಿಲ್ಲಾ ಆರೋಗ್ಯ ಅಧಿಕಾರಿ ಡಾ|| ಕಿಶೋರ್, ಜಿಲ್ಲಾ ಲೆಪ್ರಸಿ ಅಧಿಕಾರಿ ಮತ್ತು ಮಾನಸಿಕ ಆರೋಗ್ಯ ಅಧಿಕಾರಿ ಡಾ|| ಸುದರ್ಶನ್, ತಾಲೂಕು ಆರೋಗ್ಯ ಅಧಿಕಾರಿ ಡಾ|| ಸುಜಯ್ ಭಂಡಾರಿ ಇವರು ಉಪಸ್ಥಿತರಿರುತ್ತಾರೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಇವರು ವಹಿಸಲಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪ್ರಕಟಣೆಯಲ್ಲಿ ತಿಳಿಸಿದೆ.