ರೈಲಿಗೆ ಕಲ್ಲೆಸೆತ ಪ್ರಕರಣ – 50 ಮಂದಿ ವಶಕ್ಕೆ

(ನ್ಯೂಸ್ ಕಡಬ) newskadaba.com ಕಾಸರಗೋಡು, ಆ. 23. ರೈಲುಗಳ ಮೇಲೆ ನಿರಂತರ ಕಲ್ಲೆಸೆತದ ಘಟನೆಗಳು ನಡೆಯುತ್ತಿರುವ ಹಿನ್ನೆಲೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿರುವ ಕಾಸರಗೋಡು ಪೊಲೀಸರು ಮಂಗಳವಾರ ಬೆಳಗ್ಗಿನಿಂದ ತಪಾಸಣೆ ನಡೆಸಿ 50 ಮಂದಿಯನ್ನು ವಶಕ್ಕೆ ಪಡೆದಿರುವ ಘಟನೆ ವರದಿಯಾಗಿದೆ.

ರೈಲು ಹಳಿ ಪರಿಸರದಲ್ಲಿ ಸಂಶಯಾಸ್ಪದವಾಗಿ ಕಂಡು ಬಂದ ಹಿನ್ನಲೆಯಲ್ಲಿ ಇವರನ್ನು ವಶಕ್ಕೆ ಪಡೆದು ಮಾಹಿತಿ ಕಲೆ ಹಾಕಲಾಗಿದ್ದು, ತಪ್ಪಿತಸ್ಥರ ವಿರುದ್ಧ 10 ವರ್ಷಗಳ ಕಠಿಣ ಶಿಕ್ಷೆ ನೀಡುವ ಮೊಕದ್ದಮೆಯನ್ನು ಇವರ ಮೇಲೆ ಹೂಡಲಾಗುವುದು. ರೈಲ್ವೇ ಹಳಿ ಕೇಂದ್ರೀಕರಿಸಿ ಪೊಲೀಸ್ ನಿಗಾ ಹಾಗೂ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ. ರೈಲ್ವೇ ಹಳಿ ಪರಿಸರದ ಮನೆಗಳನ್ನು ಕೇಂದ್ರೀಕರಿಸಿ ಪೊಲೀಸರು ನಿಗಾ ವಹಿಸಿದ್ದಾರೆ.

Also Read  ವಾಯುಭಾರ ಕುಸಿತ: ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಭಾರಿ ಮಳೆ 35 ಮಂದಿ ಮೃತ್ಯು..!

error: Content is protected !!
Scroll to Top