ಯುವಜನತೆ ಕೌಶಲ್ಯ ಬಳಸಿಕೊಂಡು ಸ್ವ-ಉದ್ಯೋಗ ಮಾಡಲು ಕರೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 22. ಯುವಜನರು ತಮ್ಮಲ್ಲಿರುವ ಕೌಶಲ್ಯಗಳನ್ನು ಬಳಸಿಕೊಂಡು ಸ್ವ-ಉದ್ಯೋಗ ಮಾಡಲು ಕಾಲೇಜು ಮಟ್ಟದಲ್ಲಿ ಉತ್ತೇಜನ ನೀಡಬೇಕೆಂದು ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಪ್ರೊ. ರಾಮೇ ಗೌಡ ಅಭಿಪ್ರಾಯಪಟ್ಟರು.

ಜಿಲ್ಲಾ ಕೌಶಲ್ಯಾಭಿವೃದ್ಧಿ ಕಛೇರಿ, ಮಂಗಳೂರು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ, ಎಸ್‍ಎಪಿ (ಸ್ಯಾಪ್), ಯುಎನ್‍ಡಿಪಿ-ಕೋಡ್ ಉನ್ನತಿ ಮತ್ತು ಸೆಂವೆಂತ್ ಸೆನ್ಸ್ ಟ್ಯಾಲೆಂಟ್ ಸೆಲ್ಯುಷನ್ಸ್ ವತಿಯಿಂದ ನಗರದ ಜಿಲ್ಲಾ ಕೌಶಲ್ಯಾಭಿವೃದ್ಧಿ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಎರಡು ದಿನಗಳ ಪ್ರಾಜೆಕ್ಟ್ ಕೋಡ್ ಉನ್ನತಿ ಅಧ್ಯಾಪಕರ ಉದ್ಯಮಶೀಲತಾ ಅಭಿವೃದ್ಧಿ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಶಿಕ್ಷಣ ಪೂರೈಸಿದ ನಂತರ ಉದ್ಯೋಗ ಅರಸುತ್ತಾ ಹೋಗುವ ಬದಲು ಸ್ವ ಉದ್ಯೋಗ ಮಾಡಲು ಇದರಿಂದ ಅನುಕೂಲವಾಗಲಿದೆ ಎಂದವರು ಹೇಳಿದರು.

Also Read  ಕಡಬ: ಕೊರೊನಾ ವಾರಿಯರ್‌ ಗೆ ಪೊರಕೆಯಿಂದ ಹಲ್ಲೆ ➤ ಪ್ರಕರಣ ತಡವಾಗಿ ಬೆಳಕಿಗೆ,ಜಿಲ್ಲಾಧಿಕಾರಿಗೆ ದೂರು


ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಸತ್ಯಲತಾ ಮಾತನಾಡಿ, ಸರ್ಕಾರವು ಸ್ವ-ಉದ್ಯೋಗ ಆರಂಭಿಸಲು ಯುವಜನರಿಗೆ ಹಲವಾರು ಅವಕಾಶ ನೀಡುತ್ತಿದೆ ಖಾಸಗಿ ಉದ್ಯೋಗಾವಕಾಶಗಳಿಗಾಗಿ ಸ್ಕಿಲ್ ಕನೆಕ್ಟ್ ಪೋರ್ಟಲ್ ಅನ್ನು ಅನಾವರಣಗೊಳಿಸಿದೆ, ಯುವಜನರು ಈ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕೆಂದರು. ಯುಎನ್‍ ಡಿಪಿಯ ಜಿಲ್ಲಾ ಪ್ರಾಜೆಕ್ಟ್ ಅಸೋಸಿಯೇಟ್ ಶಿವಕುಮಾರ ಸ್ವಾಮಿ ಮಾತನಾಡಿ, ಗ್ರಾಮೀಣ ಭಾಗದ ಯುವಜನರು ತಮ್ಮ ಕೌಶಲ್ಯವನ್ನು ಉಪಯೋಗಿಸಿಕೊಂಡು ಸ್ವ-ಉದ್ಯೋಗವನ್ನು ಆರಂಭಿಸಬಹುದು. ಸಾಧನೆಯ ಛಲ ಇದ್ದರೆ ಖಂಡಿತ ಉದ್ಯಮ ಸೋಲಲು ಸಾಧ್ಯವಿಲ್ಲ. ಈ ಬಗ್ಗೆ ಯುವಜನರಲ್ಲಿ ಉತ್ಸಾಹ ತುಂಬಬೇಕು ಎಂದು ಹೇಳಿದರು. ತರಬೇತುದಾರರಾಗಿ ರವಿರಾಜ್ ಭಾಗವಹಿಸಿದರು. ಕಾಲೇಜು ಶಿಕ್ಷಣ ಇಲಾಖೆಯ ವಿಶೇಷ ಅಧಿಕಾರಿ ದೇವಿಪ್ರಸಾದ್ ಯು, ಯುಎನ್‍ಡಿಪಿಯ ದೀಕ್ಷಾ, ಶೀತಲ್, ಕೀರ್ತನ್‍ರಾಜ್ ಉಪಸ್ಥಿತರಿದ್ದರು. ಲೀಡಿಯಾ ಕಾರ್ಯಕ್ರಮ ನಿರೂಪಿದರು. ಶ್ರೀಕಾಂತ್ ಸ್ವಾಗತಿಸಿದರು.

Also Read  ಕೊಳಚೆ ನೀರಿನ ಪೈಪು ಒಡೆದು ರಸ್ತೆಯಲ್ಲೇ ಹರಿಯುತ್ತಿರುವ ತ್ಯಾಜ್ಯ ನೀರು ► ಕಡಬದ ವರ್ತಕರಿಂದ ಗ್ರಾಮ ಪಂಚಾಯತ್ ಗೆ ಮುತ್ತಿಗೆ

error: Content is protected !!
Scroll to Top