ಗೃಹರಕ್ಷಕ ದಳದ ಘಟಕಾಧಿಕಾರಿಗಳ ಸಭೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 22. ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ 15 ಘಟಕಗಳ ಘಟಕಾಧಿಕಾರಿಗಳ ಸಭೆ ನಗರದ ಮೇರಿಹಿಲ್‍ ನಲ್ಲಿರುವ ಗೃಹರಕ್ಷಕ ದಳದ ಕಛೇರಿಯಲ್ಲಿ ಮಂಗಳವಾರದಂದು ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಮಾನಸಿಕ ಆರೋಗ್ಯ ಮತ್ತು ಮಾದಕ ದ್ರವ್ಯ ಜಾಗೃತಿ ಕಾರ್ಯಗಾರ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಗೃಹರಕ್ಷಕರನ್ನು ನಿಯೋಜಿಸುವ ಕುರಿತು, ಆಯುಕ್ತರ ಕಛೇರಿಗೆ ಹೆಚ್ಚುವರಿ ಗೃಹರಕ್ಷಕರನ್ನು ನಿಯೋಜಿಸುವ ಬಗ್ಗೆ ಕವಾಯತು ಹಾಜರಾತಿ ಪಟ್ಟಿಯನ್ನು 5ನೇ ತಾರೀಖಿನೊಳಗೆ ನೀಡುವ ಕುರಿತು, ಮುಂಬರುವ ಚುನಾವಣಾ ಕರ್ತವ್ಯಕ್ಕೆ ಗೃಹರಕ್ಷಕರನ್ನು ನಿಯೋಜಿಸುವ ಬಗ್ಗೆ ಚರ್ಚಿಸಲಾಯಿತು. ಗೃಹರಕ್ಷಕರ ಕ್ಷೇಮಾಭಿವೃದ್ದಿ ನಿಧಿಗೆ ವಂತಿಗೆಯನ್ನು ಕಟ್ಟಲು ಬಾಕಿ ಇರುವ ಗೃಹರಕ್ಷಕರ ಬಗ್ಗೆ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು ಚರ್ಚಿಸಲಾಯಿತು. ಮೂರು ವರ್ಷಗಳನ್ನು ಮೀರಿದ ಗೃಹರಕ್ಷಕರು ನವೀಕರಣ ಮಾಡಿಸಲು ಸೂಚಿಸಲಾಯಿತು ಹಾಗೂ ಗೃಹರಕ್ಷಕರ ಕುಂದುಕೊರತೆಗಳ ಬಗ್ಗೆ ಚರ್ಚಿಸಲಾಯಿತು.

Also Read  ಗುರುಪುರ ಸೇತುವೆ ಬಳಿ ಬೈಕ್ ನಿಲ್ಲಿಸಿ ಕಾಣೆಯಾಗಿದ್ದ ಯುವಕನ ಮೃತದೇಹ ಪತ್ತೆ..!

ಉಪಸಮಾದೇಷ್ಟರಾದ ರಮೇಶ್ ಅವರು ಸ್ವಾಗತ ಭಾಷಣ ಮಾಡಿದರು. ಕಛೇರಿಯ ಪ್ರಥಮ ದರ್ಜೆ ಸಹಾಯಕಿ ಶ್ರೀಮತಿ ಶ್ಯಾಮಲಾರವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ 15 ಘಟಕಗಳ ಘಟಕಾಧಿಕಾರಿಗಳಾದ ಮಾರ್ಕ್‍ಶೇರ್ ಸೀನಿಯರ್ ಪ್ಲಟೂನ್ ಕಮಾಂಡರ್ ಮಂಗಳೂರು ಘಟಕ, ಐತಪ್ಪ ಘಟಕಾಧಿಕಾರಿ ಬಂಟ್ವಾಳ ಘಟಕ, ಅಭಿಮನ್ಯು ರೈ ಘಟಕಾಧಿಕಾರಿ ಪುತ್ತೂರು ಘಟಕ, ತೀರ್ಥೇಶ್ ಘಟಕಾಧಿಕಾರಿ ಕಡಬ ಘಟಕ, ಪ್ರಭಾರ ಘಟಕಾಧಿಕಾರಿಗಳಾದ ಎಂ. ಭಾಸ್ಕರ್ ಉಳ್ಳಾಲ ಘಟಕ, ಲೋಕೇಶ್ ಮೂಲ್ಕಿ ಘಟಕ, ದಿನೇಶ್ ಉಪ್ಪಿನಂಗಡಿ ಘಟಕ, ರಮೇಶ್ ಸುರತ್ಕಲ್ ಘಟಕ, ಹರಿಶ್ಚಂದ್ರ ಸುಬ್ರಹ್ಮಣ್ಯ ಘಟಕ, ಜಯಾನಂದ ಬೆಳ್ತಂಗಡಿ ಘಟಕ, ಸೋಮನಾಥ ಸುಳ್ಯ ಘಟಕ, ಶಿವಪ್ಪ ನಾಯ್ಕ ಪಣಂಬೂರು ಘಟಕ, ಉಮೇಶ್ ಬಂಗೇರಾ ವಿಟ್ಲ ಘಟಕ ಇವರುಗಳು ಉಪಸ್ಥಿತರಿದ್ದರು.

Also Read  ಜಾತಿಗಣತಿ ವರದಿಯನ್ನು ಜನರ ಮುಂದುಡುವ ಅಗತ್ಯವಿದೆ: ಡಾ. ಜಿ. ಪರಮೇಶ್ವರ್

error: Content is protected !!
Scroll to Top