ವಿವಿಧ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಆರೋಪಿ ಅರೆಸ್ಟ್

(ನ್ಯೂಸ್ ಕಡಬ) newskadaba.com ಕಾಸರಗೋಡು, ಆ. 22. ಕೊಲೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಪೊಲೀಸರಿಗರ ಬೇಕಾಗಿದ್ದ ಆರೋಪಿಯೋರ್ವನನ್ನು ಕಾಫಾ ಕಾಯ್ದೆಯಂತೆ ಕುಂಬಳೆ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.

ಬಂಧಿತ ಆರೋಪಿಯನ್ನು ಬಂದ್ಯೋಡು ಅಡ್ಕ ಬೈದಳದ ಅಬ್ದುಲ್ ಲತೀಫ್(35) ಎಂದು ಗುರುತಿಸಲಾಗಿದೆ. ಈತನ ಸಹಚರರಾಗಿದ್ದ ಮೀಯಪದವಿನ ರಹೀಮ್ ಮತ್ತು ಲತೀಫ್ ನನ್ನು ಒಂದು ತಿಂಗಳ ಹಿಂದೆ ಪೊಲೀಸರು ಬಂಧಿಸಿದ್ದರು. ಈತ ಐದು ವರ್ಷದ ಹಿಂದೆ ಉಪ್ಪಳ ಸೋಂಕಾಲ್ ಪುಳಿಕುತ್ತಿಯ ಪೈಂಟಿಂಗ್ ಕಾರ್ಮಿಕ ಅಲ್ತಾಫ್ ನನ್ನು ಉಪ್ಪಳದಿಂದ ಅಪಹರಿಸಿ ಕರ್ನಾಟಕದ ನಿರ್ಜನ ಪ್ರದೇಶದಲ್ಲಿ ಕೊಲೆಗೈದ ಪ್ರಕರಣದ ಆರೋಪಿಯಾಗಿದ್ದಾನೆ ಎನ್ನಲಾಗಿದೆ.

Also Read  ATM ಯಂತ್ರವನ್ನೇ ಹೊತ್ತೊಯ್ದ ದುಷ್ಕರ್ಮಿಗಳು...!

error: Content is protected !!
Scroll to Top