ಆಲಂಕಾರು: ಎಂಡೋ ಸಂತ್ರಸ್ತರ ಉಚಿತ ಆರೋಗ್ಯ ತಪಾಸಣಾ ಶಿಬಿರ

(ನ್ಯೂಸ್ ಕಡಬ) newskadaba.com ಆಲಂಕಾರು, ಆ. 22. ದ.ಕ.ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯಾಧಿಕಾರಿ ಕಚೇರಿ ಪುತ್ತೂರು, ಪ್ರಾಥಮಿಕ ಆರೋಗ್ಯ ಕೇಂದ್ರ ಕೊಯಿಲ ಮತ್ತು ಆಲಂಕಾರು ಗ್ರಾ.ಪಂ. ಸಹಕಾರದಲ್ಲಿ ಎಂಡೋ ಸಲ್ಫಾನ್ ಸಂತ್ರಸ್ಥರ ಮತ್ತು ವಿಕಲಚೇತನರ ಉಚಿತ ಆರೋಗ್ಯ ತಪಾಸಣಾ ಶಿಬಿರ ಮಂಗಳವಾರದಂದು ಆಲಂಕಾರು ಗ್ರಾ.ಪಂ. ಸಭಾಭವನದಲ್ಲಿ ನಡೆಯಿತು.

ಮಂಗಳೂರು ಅತ್ತಾವರ ಕೆ.ಎಂ.ಸಿ.ಆಸ್ಪತ್ರೆಯ ತಜ್ಞ ವೈದ್ಯರು ತಪಾಸಣೆ ಮಾಡಿ ಸೂಕ್ತ ಚಿಕಿತ್ಸೆಯ ಬಗ್ಗೆ ಮಾಹಿತಿ ನೀಡಿದರು. ಆಲಂಕಾರು, ಪೆರಾಬೆ, ಕುಂತೂರು ಗ್ರಾ.ಪಂ.ವ್ಯಾಪ್ತಿಯ ಎಂಡೋ ಪೀಡಿತರು ಮತ್ತು ವಿಕಲಚೇತನರು ಶಿಬಿರದ ಪ್ರಯೋಜನ ಪಡೆದುಕೊಂಡರು. ಈ ಸಂದರ್ಭದಲ್ಲಿ ಸಮುದಾಯ ಆರೋಗ್ಯ ಸುರಕ್ಷಾಧಿಕಾರಿ ರವಿಶಂಕರ್, ಸಮುದಾಯ ಆರೋಗ್ಯಾಧಿಕಾರಿ ಯಶ್ಮಿತಾ, ಸಮುದಾಯ ಆರೋಗ್ಯ ಸುರಕ್ಷಾಧಿಕಾರಿ ಸರೋಜಿನಿ, ವಿಕಲಚೇತನರ ಇಲಾಖೆಯಡಿ ಕರ್ತವ್ಯ ನಿರ್ವಹಿಸುತ್ತಿರುವ ಆಲಂಕಾರು ಗ್ರಾ.ಪಂ. ನ ಮೋನಪ್ಪ ಬರೆಪುದೇಲು, ಆಶಾ ಕಾರ್ಯಕರ್ತೆಯರಾದ ತಾರಾ ಬಿ., ಪ್ರೇಮ ಎನ್., ಡೀಕಮ್ಮ, ಮೀನಾಕ್ಷಿ, ಪೆರಾಬೆ ವ್ಯಾಪ್ತಿಯ ಲವೀನ ಮತ್ತು ಲಸ್ಸಿ ಉಪಸ್ಥಿತರಿದ್ದರು.

Also Read  ಇಚಿಲಂಪಾಡಿ: ರಸ್ತೆ ಬದಿಯ ತೋಡಿಗೆ ಇಳಿದ ಲಾರಿ

error: Content is protected !!
Scroll to Top