(ನ್ಯೂಸ್ ಕಡಬ) newskadaba.com ಮಾಸ್ಕೋ, ಆ. 22. ಭಾರತದ ಇಸ್ರೋ ಸಂಸ್ಥೆಯ ಚಂದ್ರಯಾನ-3 ಉಡಾವಣೆಯ ಬೆನ್ನಲ್ಲೇ ರಷ್ಯಾ ಕೈಗೊಂಡಿದ್ದ ಚಂದ್ರಯಾನದ ಲೂನಾ ನೌಕೆಯು ತಾಂತ್ರಿಕ ದೋಷದಿಂದಾಗಿ ಚಂದ್ರನ ಮೇಲ್ಮೈನಲ್ಲಿ ಪತನಗೊಂಡಿತ್ತು, ಈ ಸುದ್ದಿ ತಿಳಿಯುತ್ತಿದ್ದಂತೆಯೇ ಆಘಾತಗೊಂಡ ಹಿರಿಯ ವಿಜ್ಞಾನಿಯೊಬ್ಬರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ.
ಲೂನಾ ಮಿಷನ್ ವಿಫಲವಾದ ನಂತರ ಈ ಯೋಜನೆಯಲ್ಲಿ ಭಾಗಿಯಾಗಿದ್ದ ಮಿಖಾಯಿಲ್ ಮಾರೊವ್(90) ಅವರ ಆರೋಗ್ಯ ತೀವ್ರ ಹದಗೆಟ್ಟ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿದೆ.
ಚಂದ್ರನಲ್ಲಿ ಘನೀಕರಣಗೊಂಡಿರುವ ನೀರು ಹಾಗೂ ಅಮೂಲ್ಯ ಅಂಶಗಳ ಕುರಿತು ಅನ್ವೇಷಣೆ ಮಾಡುವ ಉದ್ದೇಶದಿಂದ ಲೂನಾ 25 ನೌಕೆಯನ್ನು ಆಗಸ್ಟ್ 11 ರಂದು ರಷ್ಯಾ ಉಡಾವಣೆ ಮಾಡಿತ್ತು. ನೌಕೆಯು ಆಗಸ್ಟ್ 21 ರಂದು ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಬೇಕಿತ್ತು. ಹಾಗಾಗಿ ಶನಿವಾರದಂದು ಫ್ರೀ ಲ್ಯಾಂಡಿಂಗ್ ಕಕ್ಷೆಯ ನೌಕೆಯನ್ನು ತರುವ ಕೆಲಸ ನಡೆದಿತ್ತು, ಸುಮಾರು 11 ಗಂಟೆ ವೇಳೆಗೆ ನೌಕೆಯಲ್ಲಿ ತಾಂತ್ರಿಕ ದೋಷ ಕಂಡುಬಂದಿತ್ತು.