ಗೃಹರಕ್ಷಕ ದಳದ ವತಿಯಿಂದ ಸದ್ಭಾವನಾ ದಿನ ಆಚರಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 22. ಕೇಂದ್ರ ಕಛೇರಿಯ ಆದೇಶದಂತೆ ನಗರದ ಮೇರಿಹಿಲ್ ನ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ ಕಛೇರಿಯಲ್ಲಿ ಸದ್ಬಾವನಾ ದಿನದ ಪ್ರತಿಜ್ಞೆಯನ್ನು ಜಿಲ್ಲಾ ಸಮಾದೇಷ್ಟ ಡಾ|| ಮುರಲೀ ಮೋಹನ್ ಚೂಂತಾರು ಇವರ ಸಮ್ಮುಖದಲ್ಲಿ ನಡೆಸಲಾಯಿತು ಹಾಗೂ ಗೃಹರಕ್ಷಕರಿಗೆ ಪ್ರತಿಜ್ಞಾವಿಧಿಯನ್ನು ಭೋದಿಸಲಾಯಿತು.

 


ಈ ಪ್ರತಿಜ್ಞಾವಿಧಿಯಲ್ಲಿ “ಜಾತಿ, ಧರ್ಮ, ಪ್ರದೇಶ, ಮತ ಅಥವಾ ಭಾಷೆಯ ಭೇಧ ಭಾವವಿಲ್ಲದೇ ಭಾರತದ ಎಲ್ಲಾ ಜನತೆಯ ಭಾವೈಕ್ಯ ಮತ್ತು ಸೌಹಾರ್ದಕ್ಕಾಗಿ ಕಾರ್ಯ ನಿರ್ವಹಿಸುತ್ತೇನೆ, ಅಲ್ಲದೇ ವೈಯಕ್ತಿಕವಾಗಿಯಾಗಲೀ ಅಥವಾ ಸಾಮೂಹಿಕವಾಗಿಯಾಗಲೀ ನಮ್ಮಲ್ಲಿರುವ ಎಲ್ಲ ಭೇದಭಾವಗಳನ್ನು ಹಿಂಸಾಚಾರಕ್ಕೆ ಅವಕಾಶ ನೀಡದೇ ಸಮಾಲೋಚನೆ ಹಾಗೂ ಸಂವಿಧಾನಾತ್ಮಕ ಕ್ರಮಗಳ ಮೂಲಕ ಪರಿಹರಿಸುತ್ತೇವೆ” ಎಂದು ಭೋದಿಸಲಾಯಿತು. ಈ ಸಂದರ್ಭದಲ್ಲಿ ಹಿರಿಯ ಗೃಹರಕ್ಷಕರಾದ ಸುನೀಲ್ ಕುಮಾರ್, ಧನಂಜಯ್, ಸಂಶುದ್ದಿನ್, ರೋಹಿದಾಸ್, ಪ್ರಸಾದ್, ನಿಖಿಲ್, ರಾಘವೇಂದ್ರ, ಸುಲೋಚನ, ಜಯಲಕ್ಷ್ಮೀ ಮುಂತಾದವರು ಉಪಸ್ಥಿತರಿದ್ದರು.

Also Read  ಉಡುಪಿ: ಮನೆಗೋಡೆ ಕುಸಿತ ➤ ಲಕ್ಷಾಂತರ ರೂ. ನಷ್ಟ

 

error: Content is protected !!
Scroll to Top