ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ವಿದ್ಯಾರ್ಥಿ ಮೃತ್ಯು

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಆ. 22. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಹತ್ತನೇ ತರಗತಿ ವಿದ್ಯಾರ್ಥಿ ಅಹ್ಮದ್ ಸಹದ್‌ ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಮೃತಪಟ್ಟಿರುವ ಕುರಿತು ವರದಿಯಾಗಿದೆ.

ಪೆದಮಲೆಯ ಸಮದ್ ಹಾಜಿ ಹಾಗೂ ರೇಷ್ಮಾ ದಂಪತಿಯ ಪುತ್ರನಾದ ಈತ 10 ನೇ ತರಗತಿ ಕಲಿಯುತ್ತಿದ್ದು, ಪಠ್ಯ- ಪಠ್ಯೇತರ ಚಟುವಟಿಕೆಗಳಲ್ಲಿ ಮುಂದಿದ್ದು, ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ.
ಮೃತನ ಸ್ಮರಣಾರ್ಥ ಆ. 22ರಂದು ಇಂಡಿಯನ್ ಸ್ಕೂಲ್ ಗೆ ರಜೆ ನೀಡಲಾಗಿದೆ.

Also Read  ಬ್ರಿಡ್ಜ್ ಕಾಮಗಾರಿಗೆ ತಂದಿಡಲಾಗಿದ್ದ ರಾಡ್ ಕಳವು - ದೂರು ದಾಖಲು

error: Content is protected !!
Scroll to Top