ಕೆಮ್ಮಾರ ಸ. ಪ್ರಾ. ಶಾಲೆಗೆ ನೂತನ ಕೊಠಡಿ ನಿರ್ಮಾಣ ಮತ್ತು ಪೂರ್ವ ಪ್ರಾಥಮಿಕ ಶಾಲೆ ನಡೆಸಲು ಅನುಮತಿ ಕೋರಿ ಶಾಸಕರಿಗೆ ಮನವಿ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಆ. 22. ಹಿರೇಬಂಡಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಡುವ, ಉಪ್ಪಿನಂಗಡಿ ಕಡಬ ರಾಜ್ಯ ಹೆದ್ದಾರಿ ಬದಿಯಲ್ಲಿನ ಕೆಮ್ಮಾರ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯು 1954 ರಲ್ಲಿ ಆರಂಭಗೊಂಡಿರುತ್ತದೆ. ಸುಮಾರು 69 ವರ್ಷ ಹಳೇಯದಾಗಿರುವ ಈ ಶಾಲೆಯಲ್ಲಿ ಪ್ರಸ್ತುತ ಒಂದರಿಂದ ಎಂಟನೇ ತರಗತಿ ವರೆಗೆ 110 ರಷ್ಟು ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಇಷ್ಟರವರೆಗೆ ಯಾವುದೇ ನೂತನ ಕೊಠಡಿ ಅಥವಾ ಕಟ್ಟಡದ ಮಂಜೂರು ಆಗಿರುವುದಿಲ್ಲ.

ಹಳೆಯ ಕಟ್ಟಡ ಬಿರುಕು ಬಿಟ್ಟಿದ್ದು, ಮತ್ತು ಮೇಲ್ಛಾವಣಿ ಗೆದ್ದಲು ಹಿಡಿದು ತೀರಾ ಹದಗೆಟ್ಟಿದ್ದು, ಹೊಸ ಕೊಠಡಿಗಳ ನಿರ್ಮಾಣಕ್ಕೆ ಆಗ್ರಹಿಸಿ ಮತ್ತು 2024-25ನೇ ಸಾಲಿನಿಂದ ಪೂರ್ವ ಪ್ರಾಥಮಿಕ ಶಾಲೆ ನಡೆಸಲು ಸರಕಾರಿ ನಿಯಮದಂತೆ ಆಯ್ಕೆ ಮಾಡಲು ಅನುಮತಿ ಕೋರಿ ಎರಡು ಪ್ರತ್ಯೇಕ ಮನವಿಯನ್ನು ಸ್ಥಳೀಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಅಶೋಕ್ ಕುಮಾರ್ ರೈ ಮತ್ತು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಲೋಕೇಶ್ ರವರಿಗೆ ಮನವಿಯನ್ನು ಸಲ್ಲಿಸಲಾಯಿತು.

Also Read  ಕಂಟೈನರ್ ನಲ್ಲಿ 17 ಜಾನುವಾರುಗಳ ಸಾಗಾಟ ➤ ಇಬ್ಬರ ಹೆಡೆಮುರಿ ಕಟ್ಟಿದ ಪೊಲೀಸರು

ಈ ಸಂದರ್ಭದಲ್ಲಿ ಶಾಲಾಭಿವೃಧ್ದಿ ಸಮಿತಿ ಅಧ್ಯಕ್ಷರಾದ ಅಝೀಝ್ ಬಿ.ಕೆ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ಮೋಹನದಾಸ ಶೆಟ್ಟಿ, ಶಾಲಾಭಿವೃಧ್ದಿ ಸಮಿತಿ ಸದಸ್ಯರಾದ ವಾಮನ ಬರಮೇಲು, ಪಧ್ಮನಾಭ ಶೆಟ್ಟಿ , ಹಳೆ ವಿದ್ಯಾರ್ಥಿ ಅಬ್ದುಲ್ ಗಫ್ಫಾರ್ ಕೆಮ್ಮಾರ ಮೊದಲಾದವರು ಉಪಸ್ಥಿತರಿದ್ದರು.

error: Content is protected !!
Scroll to Top