ಪೊಲೀಸ್ ಅಧಿಕಾರಿಯೆಂದು ನಂಬಿಸಿ ವಂಚನೆಗೆ ಯತ್ನ – ನರ್ಸಿಂಗ್ ವಿದ್ಯಾರ್ಥಿ ಅರೆಸ್ಟ್

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 21. ಪೊಲೀಸ್ ಅಧಿಕಾರಿಯೆಂದು ನಂಬಿಸಿ ವಂಚಿಸಲೆತ್ನಿಸುತ್ತಿದ್ದ ಕೇರಳ ಮೂಲದ ನರ್ಸಿಂಗ್ ವಿದ್ಯಾರ್ಥಿಯನ್ನು ಉರ್ವ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.


ಬಂಧಿತನನ್ನು ಬೆನೆಡಿಕ್ಟ್ ಸಾಬೂ (25) ಎಂದು ಗುರುತಿಸಲಾಗಿದೆ. ಈತನಿಂದ ಕೇರಳದ ‘ರಾ’ ಅಧಿಕಾರಿ ಮತ್ತು ಅಗ್ರಿಕಲ್ಚರ್ ಹಾಗೂ ಫಾರ್ಮರ್ಸ್ ವೆಲ್ಫೇರ್ ಡಿಪಾರ್ಟೆಂಟ್‌ಮೆಂಟ್ ಎಂಬ 380 ಐಡಿ ಕಾರ್ಡ್ ಗಳನ್ನು ಹಾಗೂ ಒಂದು ಜೊತೆ ಪಿಎಸ್ಸೈ ಪೊಲೀಸ್ ಸಮವಸ್ತ್ರ, ಪೊಲೀಸ್ ಶೂಸ್, ಲೋಗೋ, ಮೆಡಲ್, ಬೆಲ್ಟ್, ಕ್ಯಾಪ್, 1 ಲ್ಯಾಪ್ ಟಾಪ್ ಮತ್ತು 2 ಮೊಬೈಲ್ ಸೆಟ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

Also Read  ನವೆಂಬರ್ 13 ರಿಂದ ಆನೆಕಾಲು ರೋಗ ನಿಯಂತ್ರಣ ಕಾರ್ಯಕ್ರಮ

ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

error: Content is protected !!
Scroll to Top