ಕಡಬ: ಕೊಣಾಜೆ ಗ್ರಾ.ಪಂ.ಚುನಾವಣೆ – ಅಧ್ಯಕ್ಷೆಯಾಗಿ ರುಕ್ಮಿಣಿ, ಉಪಾಧ್ಯಕ್ಷರಾಗಿ ನವೀನ್ ಎಂ ಆಯ್ಕೆ

(ನ್ಯೂಸ್ ಕಡಬ) newskadaba.com ಕಡಬ, ಆ. 20. ಕೊಣಾಜೆ ಗ್ರಾಮ ಪಂಚಾಯತ್ ನ 2ನೇ ಅವಧಿಗೆ ಅಧ್ಯಕ್ಷೆಯಾಗಿ ರುಕ್ಮಿಣಿ ಹಾಗೂ ಉಪಾಧ್ಯಕ್ಷರಾಗಿ ನವೀನ್ ಎಂ. ಆಯ್ಕೆಯಾಗಿದ್ದಾರೆ.


ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದ್ದು, ಅಧ್ಯಕ್ಷ ಸ್ಥಾನಕ್ಕೆ ರುಕ್ಮಿಣಿ ಹಾಗೂ ಮೈತ್ರಿ, ಉಪಾಧ್ಯಕ್ಷ ಸ್ಥಾನಕ್ಕೆ ನವೀನ್ ಎಂ. ಹಾಗೂ ಸರೋಜಿನಿ ಅವರು ನಾಮಪತ್ರ ಸಲ್ಲಿಸಿದ್ದರು. ಮತದಾನದ ವೇಳೆ ರುಕ್ಮಿಣಿಯವರು 3 ಮತ ಹಾಗೂ ಮೈತ್ರಿಯವರು 2 ಮತಗಳನ್ನು ಪಡೆದು ರುಕ್ಮಿಣಿಯವರು ಗೆಲುವು ಸಾಧಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ನವೀನ್ ಅವರು 3 ಹಾಗೂ ಸರೋಜಿನಿಯವರು 2 ಮತಗಳನ್ನು ಪಡೆದು ನವೀನ್ ಎಂ, ಅವರು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿ ಕಡಬ ಜೂನಿಯರ್ ಕಾಲೇಜಿನ ಉಪನ್ಯಾಸಕ ಜ್ಞಾನೇಶ್ವರ್ ಚುನಾವಣಾ ಪ್ರಕ್ರಿಯೆ ನಡೆಸಿದರು. ಗ್ರಾ.ಪಂ. ಅಭಿವೃದ್ದಿ ಅಧಿಕಾರಿ ಪದ್ಮನಾಭ ಹಾಗೂ ಸಿಬ್ಬಂದಿಗಳು ಸಹಕರಿಸಿದರು.

Also Read  ಪುತ್ತೂರು: ಮಾಹಿತಿ ಹಕ್ಕಿನಲ್ಲಿ ಮಾಹಿತಿ ನೀಡಲು ನಿರಾಕರಣೆ ► ಕಾರ್ಮಿಕ ಇಲಾಖಾ ಅಧಿಕಾರಿ ವಿರುದ್ಧ ದೂರು

error: Content is protected !!
Scroll to Top