ಬಿಲ್ ಮೊತ್ತ ಕೇಳಿದ್ದಕ್ಕೆ ಬ್ಲೇಡ್ ನಿಂದ ಇರಿದು ಕೊಲೆಯತ್ನ – ಆರೋಪಿ ಅಂದರ್

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 20. ಡ್ರಿಂಕ್ಸ್ ಬಿಲ್ ನ ಮೊತ್ತ ಕೇಳಿದ್ದಕ್ಕೆ ವ್ಯಕ್ತಿಯೊಬ್ಬನನ್ನು ಫೋಲ್ಡಿಂಗ್ ಬ್ಲೇಡ್ ನಿಂದ ಇರಿದು ಕೊಲೆಗೆ ಯತ್ನಿಸಿದ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಮೈಸೂರು ಮೂಲದ ಆರೋಪಿ ಮೊಹಮ್ಮದ್ ಹನೀಫ್ ಅಲಿಯಾಸ್ ಚಾಕು(30) ಎಂದು ಗುರುತಿಸಲಾಗಿದೆ. ಆಗಸ್ಟ್ 18ರಂದು ರಾತ್ರಿ ನಗರದ ಸರ್ವಿಸ್ ಬಸ್ ನಿಲ್ದಾಣದ ಗೂಡಂಗಡಿ ಎದುರು ಈರಪ್ಪ ಕುರಿ ಎಂಬಾತ ಆರೋಪಿ ಹನೀಫ್ ನೊಂದಿಗೆ ಡ್ರಿಂಕ್ಸ್ ಮಾಡಿರುವ ಬಿಲ್ ಮೊತ್ತ ಕೊಡುವಂತೆ ಕೇಳಿದ್ದು, ಆಗ ಆರೋಪಿ ಮೊಹಮ್ಮದ್ ಹನೀಫ್ ಆತನನ್ನು ಕೊಲೆಗೈಯುವ ಉದ್ದೇಶದಿಂದಲೇ ಎಡಕೈಗೆ ಹಾಗೂ ಕುತ್ತಿಗೆಯ ಹಿಂಬದಿಗೆ ಫೋಲ್ಡಿಂಗ್ ಬ್ಲೇಡ್ ನಿಂದ ಇರಿದು ಜೀವ ಬೆದರಿಕೆ ಹಾಕಿದ್ದನು. ಈ ಬಗ್ಗೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ದಕ್ಷಿಣ ಪೊಲೀಸ್‌ ಠಾಣೆಯ ಸಿಬ್ಬಂದಿಗಳು ಹನೀಫ್ ನನ್ನು ದಸ್ತಗಿರಿ ಮಾಡಿ, ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ವಿಧಿಸಿದೆ ಎನ್ನಲಾಗಿದೆ.

Also Read  ಕುಲ್ಕುಂದ: ಚಾಲಕನ ನಿಯಂತ್ರಣ ತಪ್ಪಿ ಧರೆಗಿಳಿದ ಕಾರು ► ಬಿಳಿನೆಲೆ ಶಾಲೆಯ ಮುಖ್ಯ ಶಿಕ್ಷಕ ಅಪಾಯದಿಂದ ಪಾರು

error: Content is protected !!
Scroll to Top