ಮಹಿಳೆಗೆ ನಗ್ನ ವಿಡಿಯೋ ಕಾಲ್ ಮಾಡುವಂತೆ ಒತ್ತಾಯಿಸಿದ ಪತಿ

(ನ್ಯೂಸ್ ಕಡಬ) newskadaba.com ನೀಲೇಶ್ವರಂ, ಆ. 18. ಮಹಿಳೆಯೋರ್ವರಿಗೆ ದೈಹಿಕವಾಗಿ ಹಲ್ಲೆ ನಡೆಸಿ ನಗ್ನ ವೀಡಿಯೋ ಕಾಲ್ ಮಾಡುವಂತೆ ಒತ್ತಾಯಿಸಿದ ಆರೋಪದಡಿ ಮಹಿಳೆಯೊಬ್ಬರು ಪತಿ ವಿರುದ್ಧ ಪೊಲೀಸರಿಗೆ ದೂರು ನೀಡಿರುವ ಕುರಿತು ನೀಲೇಶ್ವರಂ ನಿಂದ ವರದಿಯಾಗಿದೆ.


ಮಹಿಳೆಯ ದೂರಿನ ಪ್ರಕಾರ, ವ್ಯಕ್ತಿಯು ಕೆಲವು ವ್ಯಕ್ತಿಗಳಿಂದ ಹಣ ಪಡೆದು ಮಹಿಳೆಯನ್ನು ನಗ್ನವಾಗಿ ಕಾಣಿಸಿಕೊಳ್ಳಲು ಮತ್ತು ವೀಡಿಯೊ ಕರೆ ಮಾಡಲು ಒತ್ತಾಯಿಸಿದ್ದಾನೆ. ಅಲ್ಲದೇ ಇದೇ ಕಾರಣಕ್ಕೆ ಮಹಿಳೆಗೆ ಬೆದರಿಕೆ ಮತ್ತು ಹಲ್ಲೆ ನಡೆಸಿದ ಆರೋಪವೂ ಕೇಳಿಬಂದಿತ್ತು. ಈ ಕುರಿತು ನೀಲೇಶ್ವರಂ ಪೊಲೀಸರು ವ್ಯಕ್ತಿಯ ವಿರುದ್ಧ ಕೌಟುಂಬಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದಾರೆ.

Also Read  ಚಿರತೆಯೊಂದಿಗೆ ಸೆಣಸಾಡಿ ಮಗುವನ್ನು ರಕ್ಷಿಸಿದ ತಾಯಿ!

error: Content is protected !!
Scroll to Top