ತಮಿಳುನಾಡು ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷರಾಗಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್…?

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 20. ಕರ್ನಾಟಕ ಕೇಡರ್‌ನ ಮಾಜಿ ಐಎಎಸ್ ಅಧಿಕಾರಿಯಾಗಿದ್ದ ಸಸಿಕಾಂತ್ ಸೆಂಥಿಲ್ ಅವರನ್ನು ತಮಿಳುನಾಡಿನ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷ ಮಾಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.


ಈಗಾಗಲೇ ಪಕ್ಷದ ಹಾಲಿ ಅಧ್ಯಕ್ಷ ಸ್ಥಾನದಲ್ಲಿರುವ ಕೆ.ಎಸ್‌.ಅಳಗಿರಿ ಅವರ ಅಧಿಕಾರಾವಧಿ ಪೂರ್ಣಗೊಂಡಿದ್ದು, ಆದರೆ ಅವರ ಕರ್ತವ್ಯ ನಿಷ್ಠೆಯನ್ನು ಗೌರವಿಸಿ 2024ರ ಲೋಕಸಭೆ ಚುನಾವಣೆವರೆಗೂ ಅವರನ್ನೇ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಸಲು ಹೈ ಕಮಾಂಡ್‌ ನಿರ್ಧರಿಸಿದೆ.

ಈಗಾಗಲೇ ತಮಿಳುನಾಡು ಕಾಂಗ್ರೆಸ್ ಸಮಿತಿಯು ಮೂರು ವಿಭಾಗಳಾಗಿ ವಿಭಜಿಸಲ್ಪಟ್ಟಿದ್ದು, ಇದು ಹಾಲಿ ಅಧ್ಯಕ್ಷ ಅಳಗಿರಿ ನೇತೃತ್ವದಲ್ಲಿದೆ ಮತ್ತು ಎರಡನೆಯದು ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ನಾಯಕ ಸೆಲ್ವಪೆರುತುಂಗೈ ಮುನ್ನಡೆಸುತ್ತಿದ್ದಾರೆ.

Also Read  ಬಲ್ಯ ಗ್ರಾಮ ಬೀಟ್ ಸಭೆ

error: Content is protected !!
Scroll to Top