ಕ್ವಾರ್ಟರ್ಸ್ ಮೇಲೆ ಮಲಗಿದ್ದ ಕಾರ್ಮಿಕ ಕೆಳಗೆ ಬಿದ್ದು ಮೃತ್ಯು

(ನ್ಯೂಸ್ ಕಡಬ) newskadaba.com ಕಾಸರಗೋಡು, ಆ. 20. ಕ್ವಾರ್ಟರ್ಸ್‌ನ ಮೇಲಿನಿಂದ ಬಿದ್ದು ವಲಸೆ ಕಾರ್ಮಿಕನೋರ್ವ ಮೃತಪಟ್ಟ ಘಟನೆ ಸೀತಾಂಗೋಳಿಯಲ್ಲಿ ನಡೆದಿದೆ.


ಮೃತ ಕಾರ್ಮಿಕನನ್ನು ರಾಜಸ್ತಾನ ಬೋಡಗಾನ್ ನಿವಾಸಿ ಕೇಮ್ರಾಜ್ ಗುಜ್ಜರ್ (43) ಎಂದು ಗುರುತಿಸಲಾಗಿದೆ. ಕಳೆದ 20 ವರ್ಷಗಳಿಂದ ಸೀತಾಂಗೋಳಿಯಲ್ಲಿ ಗ್ರಾನೈಟ್ ಹಾಗೂ ಮಾರ್ಬಲ್ ಕೆಲಸ ನಿರ್ವಹಿಸುತ್ತಿದ್ದ ಇವರು ಸೀತಾಂಗೋಳಿ ಪೇಟೆಯಲ್ಲಿರುವ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದರು. ಶುಕ್ರವಾರ ರಾತ್ರಿ ಕ್ವಾರ್ಟರ್ಸ್‌ನ ಮೇಲಿನ ಮಹಡಿಯಲ್ಲಿ ನಿದ್ರಿಸುತ್ತಿದ್ದ ಇವರನ್ನು ಜೊತೆಗಿದ್ದವರು ಶನಿವಾರ ಮುಂಜಾನೆ ಎದ್ದು ನೋಡಿದಾಗ ಕೇಮ್ರಾಜ್ ಗುಜ್ಜರ್ ಕ್ವಾರ್ಟರ್ಸ್‌ನ ಕೆಳಗೆ ಬಿದ್ದಿರುವುದು ಕಂಡುಬಂದಿದೆ.

Also Read  2 ವರ್ಷಗಳಿಂದ ಅಲ್ಪಸಂಖ್ಯಾತರಿಗೆ ಅನುದಾನ ನೀಡಿಲ್ಲ ➤ ಸಿಎಂ ಬೊಮ್ಮಾಯಿ       

error: Content is protected !!
Scroll to Top