ಇಂದು ಡಿಪ್ಲೊಮಾ ಸೆಮಿಸ್ಟರ್ ಗಳ ರಿಸಲ್ಟ್ ಪ್ರಕಟ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 19. ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯು 2023 ರ ಜೂನ್ / ಜುಲೈ ತಿಂಗಳಿನಲ್ಲಿ ನಡೆಸಿದ ತಾಂತ್ರಿಕ ಪರೀಕ್ಷಾ ಮಂಡಳಿಯ ವಿವಿಧ ಡಿಪ್ಲೊಮಾ ಸೆಮಿಸ್ಟರ್ ಗಳ ಫಲಿತಾಂಶವನ್ನು ಆಗಸ್ಟ್ 19 ರಂದು ರಾಜ್ಯದಲ್ಲಿನ ಎಲ್ಲಾ ಪಾಲಿಟೆಕ್ನಿಕ್‍ ಗಳಲ್ಲಿ ಮಧ್ಯಾಹ್ನ 3 ಗಂಟೆಗೆ ಪ್ರಕಟಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಪರೀಕ್ಷಾ ಫಲಿತಾಂಶವು www.myexamresults.net ಜಾಲತಾಣದಲ್ಲಿ ಲಭ್ಯವಿರುತ್ತದೆ ಎಂದು ಬೆಂಗಳೂರಿನ ತಾಂತ್ರಿಕ ಪರೀಕ್ಷಾ ಮಂಡಳಿಯ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  ಬಿಳಿನೆಲೆ : ಭಾರತೀಯ ಜನತಾ ಪಾರ್ಟಿ ಶಕ್ತಿ ಕೇಂದ್ರ ವತಿಯಿಂದ ಕುಟುಂಬ ಮಿಲನ ಕಾರ್ಯಕ್ರಮ

error: Content is protected !!
Scroll to Top