(ನ್ಯೂಸ್ ಕಡಬ) newskadaba.com ಅರಂತೋಡು, ಆ. 19. ತೆಕ್ಕಿಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಗಸ್ಟ್ 19ರಂದು “ನಮ್ಮ ಜೀವನದಲ್ಲಿ ಶಿಕ್ಷಕರ ಮಹತ್ವ” ಎಂಬ ವಿಷಯದ ಕುರಿತಾಗಿ ಶಿಕ್ಷಕರಿಗೆ ಕಾರ್ಯಾಗಾರ ಆಯೋಜಿಸಲಾಯಿತು.
ಸಜ್ಜನ ಪ್ರತಿಷ್ಠಾನದ ಅಧ್ಯಕ್ಷರು ಹಾಗೂ ಬೆಂಗಳೂರಿನ ಪ್ರತಿಷ್ಠಿತ ಕಂಪನಿ ಫಾರ್ಮೆಡ್ ಲಿಮಿಟೆಡ್ ನ ಮಾನವ ಸಂಪನ್ಮೂಲ ಹಿರಿಯ ಕಾರ್ಯ ನಿರ್ವಾಹಕ ಉಪಾಧ್ಯಕ್ಷರಾಗಿರುವ ಡಾ. ಉಮ್ಮರ್ ಬೀಜದಕಟ್ಟೆಯವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ, ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಸೃಜನಾತ್ಮಕವಾದಂತಹ ಜ್ಞಾನವನ್ನು ವೃಧ್ಧಿಸುವುದರ ಜೊತೆಗೆ ಶಿಕ್ಷಕರಾದವರು ಪ್ರತಿನಿತ್ಯ ಚಟುವಟಿಕೆಗಳ ಮೂಲಕ ಯೋಜನಾತ್ಮಕವಾಗಿ ವಿದ್ಯಾರ್ಥಿಗಳನ್ನು ಉತ್ತಮವಾಗಿ ಕಲಿಕೆಗೆ ಒಳಪಡಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಉನೈಸ್ ಪೆರಾಜೆ, ಗೌರವಾಧ್ಯಕ್ಷ ತಾಜ್ ಮಹಮ್ಮದ್, ಫಾರ್ಮೆಡ್ ಲಿಮಿಟೆಡ್ ನ ಮಾನವ ಸಂಪನ್ಮೂಲ ವ್ಯವಸ್ಥಾಪಕರಾಗಿರುವ ಇಸಾಕ್ ಯಾಕೂಬ್, ಕಾರ್ಯ ನಿರ್ವಾಹಕ ಮಂಜುನಾಥ್, ಶಾಲಾ ಮುಖ್ಯ ಶಿಕ್ಷಕ ಸಂಪತ್ ಜೆ ಡಿ ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.