ಸುಬ್ರಹ್ಮಣ್ಯ: ಅಕ್ರಮ ಗೋಸಾಗಾಟ – ಆರೋಪಿಗಳು ಪರಾರಿ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಆ. 19. ಅಕ್ರಮ ಗೋಸಾಗಾಟ ಮಾಡುತ್ತಿದ್ದ ಸಂದರ್ಭ ತಪಾಸಣಾ ನಿರತ ಪೊಲೀಸರು ವಾಹನ ಹಾಗೂ ಗೋವುಗಳನ್ನು ವಶಕ್ಕೆ ಪಡೆದ ಘಟನೆ ಸುಬ್ರಹ್ಮಣ್ಯದಿಂದ ವರದಿಯಾಗಿದೆ. ಆರೋಪಿಗಳು ಪರಾರಿಯಾಗಿದ್ದಾರೆ.

ಸುಬ್ರಹ್ಮಣ್ಯದ ಕುಲ್ಕುಂದ – ಬಿಸಿಲೆ ಘಾಟ್ ರಸ್ತೆಯಲ್ಲಿ ಗುರುವಾರದಂದು ಸಂಜೆ ಸುಬ್ರಹ್ಮಣ್ಯ ಪೊಲೀಸರು ವಾಹನ ತಪಾಸಣೆ ಮಾಡುತ್ತಿದ್ದ ಸಂದರ್ಭದಲ್ಲಿ ಸುಬ್ರಹ್ಮಣ್ಯ ಭಾಗದಿಂದ ಬಂದ ಗೂಡ್ಸ್‌ ವಾಹನವೊಂದನ್ನು ನಿಲ್ಲಿಸಲು ಸೂಚಿಸಿದ್ದು. ಈ ವೇಳೆ ವಾಹನದ ಚಾಲಕ ಹಾಗೂ ಇನ್ನೊರ್ವ ವ್ಯಕ್ತಿ ವಾಹನದಿಂದ ಇಳಿದು ಪರಾರಿಯಾಗಿದ್ದಾರೆ. ವಾಹನವನ್ನು ಪರಿಶೀಲನೆ ನಡೆಸಿದಾಗ ವಾಹನದಲ್ಲಿ ಮೂರು ದನ ಪತ್ತೆಯಾಗಿದೆ. ಪೊಲೀಸರು ವಾಹನ ಹಾಗೂ ಮೂರು ದನಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Also Read  ➤ ಒಡಿಶಾದ ಖುರ್ದಾದಲ್ಲಿ ಪಟಾಕಿ ಸ್ಫೋಟ; ನಾಲ್ವರು ಮೃತ್ಯು..!

error: Content is protected !!
Scroll to Top