ಅಖಿಲ ಭಾರತೀಯ ಕೊಂಕಣಿ ಸಾಹಿತ್ಯ ಪರಿಶದ್ ಇದರ ರಾಷ್ಟ್ರೀಯ ದ್ವಿತೀಯ ಸಮ್ಮೇಳನ – ಮಂಗಳೂರಿನ ಜೊಸ್ಸಿ ಪಿಂಟೊ ಕಿನ್ನಿಗೋಳಿ ಮತ್ತು ಗೋವಾದ ಹಿರಿಯ ಕವಿ ಡಾ ರಾಜಯ್ ಪವಾರ್ ಸೇರಿದಂತೆ ಇಬ್ಬರಿಗೆ ಚಾರೊಳಿ ಚುಟುಕು ರಾಷ್ಟ್ರೀಯ ಸನ್ಮಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 18. ಅಖಿಲ ಭಾರತೀಯ ಕೊಂಕಣಿ ಸಾಹಿತ್ಯ ಪರಿಶದ್ ಇದರ ರಾಷ್ಟ್ರೀಯ ದ್ವಿತೀಯ ಸಮ್ಮೇಳನವು ಆಗಸ್ಟ್ 20ರಂದು ಗೋವಾದ ಪಣಜಿಯ ಶ್ರೀ ಸರಸ್ವತಿ ಭವನದಲ್ಲಿ ನಡೆಯಲಿದೆ. ಅಲ್ಲಿ ಮಂಗಳೂರಿನ ಕೊಂಕಣಿಯ ಹಿರಿಯ ಕವಿ ಜೊಸ್ಸಿ ಪಿಂಟೊ ಕಿನ್ನಿಗೋಳಿ ಹಾಗೂ ಗೋವಾದ ಹಿರಿಯ ಕವಿ, ಗೀತೆಗಾರರಾದ ಪ್ರಾಚಾರ್ಯ ಡಾ.ರಾಜಯ್ ಪವಾರ್ ಅವರಿಗೆ ರಾಷ್ಟ್ರೀಯ ಚಾರೊಳಿ ಚುಟುಕು ಸನ್ಮಾನ ನೀಡಲಾಗುವುದು ಎಂದು ರಾಷ್ಟ್ರೀಯ ಚಾರೊಳಿ ಚುಟುಕು ಪರಿಷದ್ ನ ಅಧ್ಯಕ್ಷರಾದ ರೇಮಂಡ್ ಡಿಕೂನಾ ತಾಕೊಡೆ ಹಾಗೂ ಕೊಂಕಣಿ ಲೇಖಕ ಸಂಘ ಗೋವಾ ಇದರ ಅಧ್ಯಕ್ಷ ಗೌರೀಶ ವರ್ಣೇಕರ್ ತಿಳಿಸಿದ್ದಾರೆ.



ಕೊಂಕಣಿ ಲೇಖಕ ಸಂಘ ಗೋವಾ ಇದರ ಆಶ್ರಯದಲ್ಲಿ ನಡೆಯುವ ಒಂದು ದಿನದ ಸಮ್ಮೇಳನದ ಉಧ್ಘಾಟನೆಯನ್ನು ರಾಜ್ಯಸಭಾ ಸದಸ್ಯರಾದ ಸನ್ಮಾನ್ಯ ಸದಾನಂದ ತಾನವ್ಡೆ ಮಾಡಲಿದ್ದು, ಹಿರಿಯ ಹೆಸರಾಂತ ರಾಷ್ಟೀಯ ಕವಿ ಶಿವ್ದಾಸ್ ಎನ್ ಮುಖ್ಯ ಅತಿಥಿಯಾಗಿರುತ್ತಾರೆ. ಗೋವಾದಲ್ಲಿ ಕೊಂಕಣಿ ಭಾಷೆಯ ಶಿಕ್ಷಕಿ ಯೋಗಿತಾ ವರ್ಣೇಕರ್ ಅವರಿಂದ ವಿಶೇಷ ಚಾರೊಳಿ ಚುಟುಕು ರಚನೆ ಕಾರ್ಯಗಾರ ಉಪನ್ಯಾಸ ನಡೆಯಲಿದೆ.

ಗೋವಾದ ರಾಜ್ಯದ ಪ್ರಶಸ್ತಿ ವಿಜೇತ ‌ಕವಿ ಉದಯ್ ಮಾಂಬ್ರೊ ಅವರ ಅಧ್ಯಕ್ಷತೆಯಲ್ಲಿ ಕೇರಳ, ಹೈದರಾಬಾದ್, ಕರ್ನಾಟಕ, ಗೋವಾ, ಮಹಾರಾಷ್ಟ್ರ, ಡೆಲ್ಲಿ, ಬೆಂಗಳೂರು, ಕುಮ್ಟಾ ಪ್ರದೇಶದ ವಿವಿಧ ಬೋಲಿಗಳ(ಕೊಂಕಣಿ ಭಾಷಾ ಪ್ರಕಾರ) ಚಾರೊಳಿ ಚುಟುಕು ಕವಿಗಳಿಂದ ಕವಿಗೋಷ್ಟಿ ನಡೆಯಲಿದೆ. ಸಂಜೆಯ ಸಮಾರೋಪದಲ್ಲಿ ಉಪಸ್ಥಿಯ ಆಸ್ವಾದಕರಿಗೆ ತಮ್ಮ ಮಾತು ಮತ್ತು ಚಾರೊಳಿ ಚುಟುಕು ಪ್ರಸ್ತುತಕ್ಕೆ ಮುಕ್ತ ವೇದಿಕೆ ಇದೆ. ಗೋವಾ ಕೊಂಕಣಿ ಅಕಾಡೆಮಿ ಅಧ್ಯಕ್ಷರಾದ ಹಿರಿಯ ಸಾಹಿತಿ, ಕವಿ ಅರುಣ್ ಸಾಕ್ರದಂಡೆ ಮುಖ್ಯ ಅತಿಥಿಯಾಗಿದ್ದಾರೆ. ಕಳೆದ ವರುಷ ಮೊದಲ ಚಾರೊಳಿ ಚುಟುಕು ಸಮ್ಮೇಳನವು ಮಂಗಳೂರು ಸಂದೇಶ ಸಭಾಂಗಣದಲ್ಲಿ  ನದೆದಿತ್ತು. ಅಖಿಲ ಭಾರತ ಕೊಂಕಣಿ ಪರಿಷದ್ ಅಂದಿನ ಅಧ್ಯಕ್ಷರಾದ ಉಷಾ ರಾಣೆ ಉದ್ಘಾಟನೆ ಮಾಡಿ, ಕೇರಳದ ಆರ್ ಎಸ್ ಭಾಸ್ಕರ್ ಮತ್ತು ಗೋವಾದ ಗೌರೀಶ ವರ್ಣೇಕರ್ ಶ್ರೇಷ್ಠ ರಾಷ್ಟ್ರೀಯ ಪುರಸ್ಕಾರ ಪಡೆದಿದ್ದರು.

error: Content is protected !!

Join the Group

Join WhatsApp Group