ಬೆತ್ತಲೆ ಕಾಣೋ ಕನ್ನಡಿಯಲ್ಲಿ ಹುಡುಗಿಯನ್ನು ಕಾಣುವ ಆಸೆ – 9 ಲಕ್ಷ ರೂ. ಕಳೆದುಕೊಂಡ ವೃದ್ದ

(ನ್ಯೂಸ್ ಕಡಬ) newskadaba.com ಉತ್ತರ ಪ್ರದೇಶ, ಆ. 18. ವೃದ್ಧನೋರ್ವ ಬೆತ್ತಲೆ ಕನ್ನಡಿಯಲ್ಲಿ ಹುಡುಗಿಯರನ್ನು ಕಾಣುವ ಆಸೆಗೆ ಬರೋಬ್ಬರಿ 9 ಲಕ್ಷ ರೂ. ಕಳೆದುಕೊಂಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.


ಅವಿನಾಶ್‌ ಕುಮಾರ್‌ ಶುಕ್ಲಾ ಎಂಬಾತ ಹಣ ಕಳೆದುಕೊಂಡ ವೃದ್ದ. ಈತನಿಗೆ ಪಶ್ಚಿಮ ಬಂಗಾಳದ ಮೂವರು ವ್ಯಕ್ತಿಗಳು ಕನ್ನಡಿ ಕೊಟ್ಟು, ಇದರಲ್ಲಿ ಎಲ್ಲರೂ ಬೆತ್ತಲಾಗಿ ಕಾಣುತ್ತಾರೆ. ಇದು ಭವಿಷ್ಯವನ್ನು ತೋರಿಸುತ್ತದೆ. ಇದನ್ನು ನಾಸಾ ವಿಜ್ಞಾನಿಗಳು ಬಳಸಿದ್ದಾರೆ ಎಂದು ಸುಳ್ಳು ಹೇಳಿ ಕನ್ನಡಿ ಕೊಳ್ಳುವಂತೆ ಮಾಡಿದ್ದರು.

ಇದನ್ನು ನಂಬಿದ ವೃದ್ಧ ಬರೋಬ್ಬರಿ 9 ಲಕ್ಷ ರೂ. ಕೊಟ್ಟು ಮ್ಯಾಜಿಕ್‌ ಕನ್ನಡಿ ಖರೀದಿಸಿದ್ದನು. ಆನಂತರ ಅದರಲ್ಲಿ ಯಾವುದೇ ಮ್ಯಾಜಿಕ್‌ ಇಲ್ಲ, ತನಗೆ ವಂಚಿಸಲಾಗಿದೆ ಎಂಬುದನ್ನು ಅರಿತ ವೃದ್ಧ ಪೊಲೀಸರಿಗೆ ದೂರು ನೀಡಿದ್ದಾನೆ.

Also Read  ಫೆ. 06 ರಂದು ಇಂಟರ್ನೆಟ್ ನಿಷೇಧ ವಿರೋಧಿಸಿ ರಸ್ತೆ ಬಂದ್ ಗೆ ರೈತ ಸಂಘಟನೆ ಕರೆ

error: Content is protected !!
Scroll to Top