ಹಾರ್ಡ್ ವೇರ್ ಮಳಿಗೆಯಲ್ಲಿ ಕಳ್ಳರ ಕೈಚಳಕ – ನಗದು ಸಹಿತ 15 ಲಕ್ಷ ರೂಗಳ ಸೊತ್ತು ಕಳವು

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಆ. 18. ಇಲ್ಲಿನ ಜಗದಾಂಭ ಏಜೆನ್ಸಿ ಹೆಸರಿನ ಇಲೆಕ್ಟ್ರಿಕಲ್ ಮತ್ತು ಹಾರ್ಡ್‍ವೇರ್ ಮಳಿಗೆಗೆ ನುಗ್ಗಿದ ಕಳ್ಳರು ಎರಡು ಲಕ್ಷ ರೂ. ನಗದು ಸಹಿತ ಸುಮಾರು 15.7 ಲಕ್ಷ ರೂ. ಮೌಲ್ಯದ ಸ್ವತ್ತುಗಳನ್ನು ಕಳವು ಮಾಡಿದ ಘಟನೆ ನೆಲ್ಯಾಡಿಯಲ್ಲಿ ಗುರುವಾರದಂದು ಬೆಳಕಿಗೆ ಬಂದಿದೆ.

ಪ್ರಕಾಶ್ ಕೆ.ಜೆ. ಮಾಲಿಕತ್ವದ ಕಟ್ಟಡದಲ್ಲಿ ರಾಜಸ್ಥಾನದ ನಿವಾಸಿ ಕರಣ್ ಪಾಲ್ ಎಂಬವರ ಸಹೋದರ ನಡೆಸುತ್ತಿದ್ದ ಎಲೆಕ್ಟ್ರಿಕಲ್ ಮತ್ತು ಹಾರ್ಡ್‍ವೇರ್ ಅಂಗಡಿಯ ಶಟರ್ ಅನ್ನು ಕತ್ತರಿಸಿ, ಒಳನುಗ್ಗಿರುವ ಕಳ್ಳರು ಕ್ಯಾಶ್ ಡ್ರವರ್ ನಲ್ಲಿದ್ದ ಎರಡು ಲಕ್ಷ ರೂಪಾಯಿಯನ್ನು ದೋಚಿದ್ದಲ್ಲದೇ, ಕೆಲವು ಸಾಮಗ್ರಿಗಳು ಹಾಗೂ ಅಂಗಡಿಯ ಒಳಗೆ ಇದ್ದ ಸಿಸಿ ಕ್ಯಾಮರಾದ ಡಿವಿಆರ್ ಅನ್ನೂ ಕೂಡಾ ಕಳವು ಮಾಡಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.

Also Read  ಜುಲೈ 03ರಂದು ದೇರಳಕಟ್ಟೆಯ RKC ವಂಡರ್ ಸಿಟಿಯಲ್ಲಿ ಬ್ಲಡ್ ಡೋನರ್ಸ್ ಮಂಗಳೂರು ಇದರ ವತಿಯಿಂದ 350 ನೇ ರಕ್ತದಾನ ಶಿಬಿರ


ಆ. 17ರಂದು ಬೆಳಗ್ಗೆ ಕರಣ್‍ಪಾಲ್ ಅವರ ಭಾವ ಪ್ರೇಮ್ ಸಿಂಗ್‍ ಅಂಗಡಿಯ ಬಾಗಿಲು ತೆರೆಯಲು ಹೋದಾಗ ಘಟನೆ ಬೆಳಕಿಗೆ ಬಂದಿದ್ದು, ಈ ಬಗ್ಗೆ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಉಪ್ಪಿನಂಗಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

error: Content is protected !!
Scroll to Top