ಸದ್ಯಕ್ಕಿಲ್ಲ ಹೊಸ ಪಡಿತರ ಚೀಟಿ – ಅರ್ಜಿ ಸಲ್ಲಿಸಿರುವವರಿಗೆ ನಿರಾಸೆ

(ನ್ಯೂಸ್ ಕಡಬ) newskadaba.com ಚಿಕ್ಕಬಳ್ಳಾಪುರ, ಆ. 18. ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳ ಲಾಭ ಪಡೆಯಲು ಸಾಧ್ಯವಾಗದೇ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿ ಕಾಯುತ್ತಿರುವರಿಗೆ ರಾಜ್ಯ ಸರಕಾರ ನಿರಾಸೆ ಮೂಡಿಸಿದೆ.

ಹೊಸ ಪಡಿತರ ಚೀಟಿಗಾಗಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿರುವವರಿಗೆ ನಿರಾಸೆ ಮಾಡಿರುವ ಸರಕಾರ, ಕೇವಲ ಪಡಿತರ ಚೀಟಿಯ ತಿದ್ದುಪಡಿ ಹಾಗೂ ಕುಟುಂಬಸ್ಥರ ಸೇರ್ಪಡೆಗೆ ಮಾತ್ರ ಅವಕಾಶ ನೀಡಿ ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕರ ವ್ಯವಹಾರಗಳ ಮತ್ತು ಕಾನೂನು ಮಾಪನಶಾಸ್ತ್ರ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎ.ಹನುಮಂತರಾಜು ಆದೇಶ ಹೊರಡಿಸಿದ್ದಾರೆ. ಮುಂದಿನ ಆದೇಶದವರೆಗೆ ಯಾವುದೇ ಹೊಸ ಪಡಿತರ ಚೀಟಿಯನ್ನು ಮಂಜೂರು ಮಾಡದಂತೆಯೂ ಸೂಚಿಸಲಾಗಿದೆ.

Also Read  ನಟ ದರ್ಶನ್'ಗೆ ನೋಟಿಸ್ ಜಾರಿ, ಗನ್ ಲೈಸೆನ್ಸ್ ರದ್ದು ಸಾಧ್ಯತೆ

error: Content is protected !!
Scroll to Top