ಕೌಕ್ರಾಡಿ: ನೇಣುಬಿಗಿದು ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಫೆ.05. ಅನಾರೋಗ್ಯದಿಂದ ಬಳಲುತ್ತಿದ್ದ ಅವಿವಾಹಿತ ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ಸಂಜೆ ಕೌಕ್ರಾಡಿಯಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡವರನ್ನು ಕೌಕ್ರಾಡಿ ಗ್ರಾಮದ ಕೊಕ್ಕಡ ಕಾಪಿನ ಬಾಗಿಲು ನಿವಾಸಿ ದಿ| ದುಗ್ಗಣ್ಣ ಗೌಡ ಎಂಬವರ ಪುತ್ರ ನೇಮಣ್ಣ ಗೌಡ (56) ಎಂದು ಗುರುತಿಸಲಾಗಿದೆ. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಇವರು ತನ್ನ ಅನಾರೋಗ್ಯ ಪೀಡಿತ ತಾಯಿಯೊಂದಿಗೆ ವಾಸವಾಗಿದ್ದರು. ಅವಿವಾಹಿತರಾಗಿದ್ದ ಇವರು ಸೋಮವಾರ ಸಂಜೆ ತನ್ನ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Also Read  ಸುರತ್ಕಲ್: ಮಾಜಿ ಶಾಸಕರ ಮನೆ ಸೀಲ್ ಡೌನ್

error: Content is protected !!
Scroll to Top