ರಾಷ್ಟ್ರಧ್ವಜ ಸಾರ್ವಭೌಮತ್ವದ ಸಂಕೇತ – ಡಾ|| ಚೂಂತಾರು

(ನ್ಯೂಸ್ ಕಡಬ) newskadaba.com  ಮಂಗಳೂರು, ಆ. 16. 76ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಸೋಮವಾರದಂದು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ ಕಛೇರಿಯಲ್ಲಿ ಸಾಂಕೇತಿಕವಾಗಿ ‘ಹರ್ ಘರ್ ತಿರಂಗ’ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು, ನಮ್ಮ ಭಾರತ ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 76 ವರ್ಷ. ಇದರ ಅಂಗವಾಗಿ ಗೃಹರಕ್ಷಕದಳದ ಕಛೇರಿಯಲ್ಲಿ ‘ಹರ್ ಘರ್ ತಿರಂಗ’ ಎಂಬ ಅಭಿಯಾನವನ್ನು ಗೃಹರಕ್ಷಕದಳ ಮತ್ತು ಪೌರರಕ್ಷಣಾ ಪಡೆಯ ವತಿಯಿಂದ ಚಾಲನೆ ನೀಡಲಾಯಿತು. ರಾಷ್ಟ್ರ ಧ್ವಜವನ್ನು ಮನೆ ಮನೆಗಳಲ್ಲಿ ಹಾರಿಸಬೇಕು, ಅರಳಿಸಬೇಕು, ಗೌರವಿಸಬೇಕು, ರಾಷ್ಟ್ರಧ್ವಜ ಎನ್ನುವುದು ಸಾರ್ವಭೌಮತ್ವದ ಸಂಕೇತವಾಗಿರುತ್ತದೆ, ಜನರಲ್ಲಿ ರಾಷ್ಟ್ರಧ್ವಜದ ಬಗ್ಗೆ  ಅರಿವು, ಜಾಗೃತಿ ಮೂಡಿಸಿ ರಾಷ್ಟ್ರದ ಬಗ್ಗೆ ಅಭಿಮಾನ ಮತ್ತು ಗೌರವ ಮೂಡಿಸಬೇಕು ಎಂದು ನುಡಿದರು. ರಾಷ್ಟ್ರ ಧ್ವಜಕ್ಕೆ ಎಲ್ಲಾ ರೀತಿಯ ಗೌರವ ನೀಡಿ ಧ್ವಜ ಸಂಹಿತೆಯ ಮಾರ್ಗದರ್ಶನದಂತೆ ನಡೆಯತಕ್ಕದ್ದು. ಪ್ರತಿ ಗೃಹರಕ್ಷಕರು ತಮ್ಮ ಮನೆಗಳಲ್ಲಿ ರಾಷ್ಟ್ರ ಧ್ವಜ ಅರಳಿಸಿ, ದೇಶ ಪ್ರೇಮ ಮೆರೆಯಬೇಕು ಎಂದು ಗೃಹರಕ್ಷಕರಿಗೆ ಆದೇಶ ನೀಡಿದರು.

Also Read  ಕೆಟ್ಟ ದೃಷ್ಟಿದೋಷ ಗಳಿಂದ ರಕ್ಷಣೆ ಮತ್ತು ದಿನ ಭವಿಷ್ಯ

ಕಾರ್ಯಕ್ರಮದಲ್ಲಿ ಮಂಗಳೂರು ಘಟಕದ ಹಿರಿಯ ಗೃಹರಕ್ಷಕರಾದ ಧನಂಜಯ್, ಸುನೀಲ್, ನವೀನ್, ಸಂಶುದ್ದೀನ್, ಸಂದೇಶ್ ಕುಮಾರ್, ನಿಖಿಲ್, ರಾಘವೇಂದ್ರ, ರೋಹಿದಾಸ್, ಸುಲೋಚನ, ಜಯಲಕ್ಷ್ಮಿ ಮುಂತಾದವರು ಉಪಸ್ಥಿತರಿದ್ದರು.

error: Content is protected !!
Scroll to Top