‘ನಂದಿನಿ’ ಪ್ರಿಯರಿಗೆ ಗುಡ್ ನ್ಯೂಸ್ – ಸಿಹಿ ಉತ್ಸವ ಆರಂಭ- 20% ರಿಯಾಯಿತಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 15. ರಾಜ್ಯಾದಾದ್ಯಂತ ಕರ್ನಾಟಕ ಸಹಕಾರ ಮಹಾ ಮಂಡಳಿಯು ನಂದಿನಿ ಸಿಹಿ ಉತ್ಸವವನ್ನು ಆಚರಿಸಲು ನಿರ್ಧರಿಸಿದ್ದು, ಇಂದಿನಿಂದ ಸೆಪ್ಟೆಂಬರ್ 20ರವರೆಗೆ ನಂದಿನಿಯ ಎಲ್ಲಾ ರೀತಿಯ ಸಿಹಿ ತಿನಿಸುಗಳ ಮೇಲೆ ಗ್ರಾಹಕರಿಗೆ ಶೇಕಡಾ 20ರಷ್ಟು ನೇರ ರಿಯಾಯಿತಿ ಸಿಗಲಿದೆ.


ಇಂದಿನಿಂದ (ಆಗಸ್ಟ್ 15) ಸೆಪ್ಟೆಂಬರ್ 20ರವರೆಗೆ ನಡೆಯುವ ಸಿಹಿ ಉತ್ಸವಕ್ಕೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ ಅವರು, ನಂದಿನಿಯ ಹೊಸ ಉತ್ಪನ್ನಗಳಾದ ಬೆಲ್ಲದ ವಿಶೇಷ ಖೋವಾ, ನಂದಿನಿ ಹಾಲಿನ ಸ್ಪೆಷಲ್ ಬರ್ಫಿ, ಬೆಲ್ಲದ ಪೇಡ, ಚಾಕೊಲೇಟ್ ಕುಕ್ಕಿಸ್, ಕಡಲೆ ಬೀಜ ಹಾಗೂ ವಿಶೇಷವಾಗಿ ತಯಾರಿಸಲಾದ ಖೋವಾ ಕಡಲೆ ಮಿಠಾಯಿಯನ್ನು ಇದೇ ಸಂದರ್ಭದಲ್ಲಿ ಲೋಕಾರ್ಪಣೆಗೊಳಿಸಿದರು.

Also Read  ಹಸು ಕೆಚ್ಚಲು ಕತ್ತರಿಸಿದ ಪ್ರಕರಣ: ಪ್ರಾಣಿ ಕಲ್ಯಾಣಕ್ಕೆ ಬಿಬಿಎಂಪಿಯಿಂದ 1533 ಸಹಾಯವಾಣಿ ಆರಂಭ


ಹಾಲಿನ ಪೇಡ, ಧಾರವಾಡ ಪೇಡ, ಕೇಸರ್ ಪೇಡ, ಮೈಸೂರು ಪಾಕ್, ಬಾದಾಮ್, ಕ್ಯಾಷು, ಏಲಕ್ಕಿ ಪೇಡ, ಡ್ರೈ ಫ್ರೂಟ್ಸ್, ಕೋಕೊನೆಟ್ ಚಾಕಲೇಟ್ ಬರ್ಫಿಗಳು, ರಸಗುಲ್ಲ, ಜಾಮೂನ್, ಕುಂದ, ಸಿರಿಧಾನ್ಯ ಹಾಲಿನ ಪುಡಿ, ಸಿರಿಧಾನ್ಯ ಲಾಡು, ಕುಕ್ಕಿಸ್ ಇವೆಲ್ಲವೂ 20% ರಿಯಾಯಿತಿ ದರದಲ್ಲಿ ಸಿಗಲಿದೆ.

error: Content is protected !!
Scroll to Top