ವಿಶ್ವ ವಿಖ್ಯಾತ ಐಫೆಲ್ ಟವರ್ ಗೆ ಬಾಂಬ್ ಬೆದರಿಕೆ – ಪ್ರವಾಸಿಗರಿಗೆ ನಿರ್ಬಂಧ

(ನ್ಯೂಸ್ ಕಡಬ) newskadaba.com ಪ್ಯಾರಿಸ್, ಆ. 14. ವಿಶ್ವದ ಪ್ರವಾಸಿ ತಾಣಗಳಲ್ಲಿ ಒಂದಾದ ವಿಶ್ವವಿಖ್ಯಾತ ಐಫೆಲ್‌ ಟವರ್‌ಗೂ ಕಂಟಕ ಎದುರಾಗಿದ್ದು, ಇದೀಗ ಐಫೆಲ್‌ ಟವರ್‌ಗೆ ಬಾಂಬ್‌ ಬೆದರಿಕೆ ಕರೆ ಬಂದಿದೆ ಎಂದು ಫ್ರೆಂಚ್‌ ಪೊಲೀಸರು ತಿಳಿಸಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.

ಬಾಂಬ್‌ ಬೆದರಿಕೆ ಕರೆ ಬರುತ್ತಿದ್ದಂತೆಯೇ ಐಫೆಲ್‌ ಟವರ್‌ ವೀಕ್ಷಣೆಗೆ ಬಂದಿದ್ದ ಪ್ರವಾಸಿಗರನ್ನು ಸ್ಥಳಾಂತರ ಮಾಡಲಾಗಿದ್ದು, ಟವರ್ ವೀಕ್ಷಣೆಗೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕಳೆದ ಒಂದು ವರ್ಷದಲ್ಲಿ 60 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ವಿಶ್ವವಿಖ್ಯಾತ ಐಫೆಲ್‌ ಟವರ್‌ ನ್ನು ವೀಕ್ಷಣೆ ಮಾಡಿದ್ದರು. ಇದೀಗ ಅಲ್ಲಿ ಎಚ್ಚರಿಕೆ ವಹಿಸಲಾಗಿದ್ದು, ಬಾಂಬ್ ವಿಲೇವಾರಿ ತಜ್ಞರು ಮತ್ತು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಶೋಧನೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

Also Read  ನೀವು ಇಷ್ಟಪಡುವಂತಹ ವ್ಯಕ್ತಿ ನಿಮ್ಮವರಂತೆ ಆಗಲು ಈ ಒಂದು ತಂತ್ರವನ್ನು ಮಾಡಿ

error: Content is protected !!
Scroll to Top