ನಾನು ಸಲಿಂಗಕಾಮಿ ಅಲ್ಲ ಎನ್ನುತ್ತಲೇ ಕಟ್ಟಡದಿಂದ ಹಾರಿದ ವಿದ್ಯಾರ್ಥಿ

(ನ್ಯೂಸ್ ಕಡಬ)newskadaba.com ಕಲ್ಕತ್ತಾ, ಆ.12. 18 ವರ್ಷದ ಜಾಧವ್‍ ಪುರ್ ವಿಶ್ವ ವಿದ್ಯಾಲಯದ ಮೊದಲ ವರ್ಷದ ವಿದ್ಯಾರ್ಥಿ ಸ್ವಾಪ್ನೋದೀಪ್ ಕುಂಡು, ಹಾಸ್ಟೆಲ್ ಕಟ್ಟಡದ ಎರಡನೇ ಮಹಡಿಯಿಂದ ಹಾರುವ ಮುನ್ನ ‘ನಾನು ಸಲಿಂಗಕಾಮಿ ಅಲ್ಲ’ ಎಂದು ಪದೇ ಪದೇ ಹೇಳುತ್ತಾ ಹೇಳಿದ್ದು ಪ್ರಾಣ ಕಳೆದುಕೊಂಡಿದ್ದಾನೆ ಎನ್ನಲಾಗಿದೆ.


ಪೊಲೀಸ್ ಮೂಲಗಳ ಪ್ರಕಾರ, ಕಟ್ಟಡದಿಂದ ಹಾರುವ ಮೊದಲು, ಸ್ವಾಪ್ಲೋದೀಪ್ ತನ್ನ ಸಹ ವಿದ್ಯಾರ್ಥಿಗಳಿಗೆ ‘ನಾನು ಸಲಿಂಗಕಾಮಿ ಅಲ್ಲ’ ಎಂದು ಹೇಳಿದ್ದು ಬಾಲ್ಕನಿಯಿಂದ ಹಾರಿದ್ದ ಯುವಕನ ದೇಹವು ಬೆತ್ತಲೆ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ವರದಿಯಾಗಿದೆ. ಕಲ್ಕಾತ್ತಾ ಪೊಲೀಸರು ಸ್ವಾಪ್ನೋದೀಪ್‍ ಕುಂಡು ಸಾವಿಗೆ ಸಂಬಂಧಿಸಿದಂತೆ. ಆರೋಪಿ ಸೌರಭ್ ಚೌಧರಿಯನ್ನು ಬಂಧಿಸಿದ್ದಾರೆ. ಆರೋಪಿ ಸೌರಭ್, ಈ ಹಿಂದೆ 2022ರಲ್ಲಿ ಜಾಧವ್ಪುಿರ್ ವಿಶ್ವವಿದ್ಯಾಲಯದಲ್ಲಿ ಗಣಿತ ಶಾಸ್ತ್ರದಲ್ಲಿ ಎಂಎಸ್ ಸಿ ಪೂರ್ಣಗೊಳಿಸಿದ್ದು, ವಿಶ್ವವಿದ್ಯಾಲಯ ಹಾಸ್ಟೆಲ್‍ ನಲ್ಲೇ ಉಳಿಯುತ್ತಿದ್ದರು.
ಪೊಲೀಸರು ತನಿಖೆ ನಡೆಸುವಾಗ, ಮೃತ ಯುವಕನ ಮೇಲೆ ನಡೆದ ರಾಗಿಂಗ್ ಘಟನೆಯಲ್ಲಿ ತಾನೂ ಪಾಲ್ಗೊಂಡಿರುವುದಾಗಿ ಆರೋಪಿ ಸೌರಭ್ ಒಪ್ಪಿಕೊಂಡಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Also Read  ಪ್ರಧಾನಿ ನರೇಂದ್ರ ಮೋದಿಗೆ ಕುವೈತ್‌ನ ಅತ್ಯುನ್ನತ ಗೌರವ ಪ್ರದಾನ

error: Content is protected !!
Scroll to Top