ಮಂಗಳೂರು ವಿವಿಯ ಹಿರಿಯ ಪ್ರಾಧ್ಯಾಪಕ ಪ್ರೊ.ಉದಯ ಬಾರ್ಕೂರು ವಿಧಿವಶ

(ನ್ಯೂಸ್ ಕಡಬ)newskadaba.com ಮಂಗಳೂರು, ಆ.12. ಮಂಗಳೂರು ವಿವಿ ಇತಿಹಾಸ ವಿಭಾಗದ ಹಿರಿಯ ಪ್ರಾಧ್ಯಾಪಕ ಪ್ರೊ.ಉದಯ ಬಾರ್ಕೂರು ಅವರು ನಿಧನರಾಗಿದ್ದಾರೆ ಎಂದು ವರದಿ ತಿಳಿಸಿದೆ. ಮಂಗಳೂರು ವಿಶ್ವವಿದ್ಯಾಲಯದಲ್ಲಿ 1989ರಿಂದ ಇತಿಹಾಸ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿರುವ ಅವರು ವಿಭಾಗದ ಅಧ್ಯಕ್ಷರಾಗಿ,ವಿವಿಯ ಸಿಂಡಿಕೇಟ್ ಸದಸ್ಯರಾಗಿ, ಕಲಾ ವಿಭಾಗದ ಡೀನ್,ಮಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಕ್ಷೇಮಪಾಲನಾ ವಿಭಾಗದ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು.

2017ರಲ್ಲಿ ಮಂಗಳೂರು ವಿವಿಯಿಂದ ಉತ್ತಮ ಪ್ರಾಧ್ಯಾಪಕ ಪ್ರಶಸ್ತಿಯನ್ನು ಪಡೆದುಕೊಂಡಿದ್ದ ಉದಯ್ ಅವರು ಇಂಡಿಯನ್ ಹಿಸ್ಟರಿ ಕಾಂಗ್ರೆಸ್,ಸೌತ್ ಇಂಡಿಯನ್ ಕಾಂಗ್ರೆಸ್,ಕರ್ನಾಟಕ ಹಿಸ್ಟರಿ ಕಾಂಗ್ರೆಸ್ ನ ಸದಸ್ಯರಾಗಿದ್ದರು. ಇತಿಹಾಸ ತಜ್ಞನಾಗಿ ಗುರುತಿಸಿದ್ದ ಇವರ ಮಾರ್ಗದರ್ಶನದಲ್ಲಿ ಏಳು ವಿದ್ಯಾರ್ಥಿಗಳು ಪಿಎಚ್‌ಡಿ ಪದವಿ ಪಡೆದುಕೊಂಡಿದ್ದಾರೆ.

Also Read  ಉಳ್ಳಾಲ: ಪಿಂಡ ಪ್ರದಾನಕ್ಕೆಂದು ಬಂದಿದ್ದ ಮಹಿಳೆ ಸಮುದ್ರಪಾಲು

error: Content is protected !!
Scroll to Top