ಆನ್‌ ಲೈನ್ ಗೇಮ್‌ ನಲ್ಲಿ 79 ಲಕ್ಷ ರೂ. ಕಳೆದುಕೊಂಡ ಯುವಕ

(ನ್ಯೂಸ್ ಕಡಬ)newskadaba.com ರಾಯಚೂರು, ಆ.12. ಆನ್‌ಲೈನ್ ಗೇಮ್ ಆ್ಯಪ್‌ ಗಳಿಂದ ಯುವಕನೋರ್ವ 79 ಲಕ್ಷ ರೂ. ಹಣ ಕಳೆದುಕೊಂಡಿರುವ ಘಟನೆ ನಡೆದಿದೆ.

ಸಹದೇವಪ್ಪ ಹಣ ಕಳೆದುಕೊಂಡ ಯುವಕ ಎಂದು ತಿಳಿದುಬಂದಿದೆ. ಹಣದ ಆಸೆಗೆ ಸುಮಾರು 79 ಲಕ್ಷ ರೂ. ಕಳೆದುಕೊಂಡು, 18 ಎಕರೆ ಜಮೀನು ಸಹ ಮಾರಾಟಮಾಡಿದ್ದಾನೆ ಎನ್ನಲಾಗಿದೆ. ರಮ್ಮಿ, ಕ್ರಿಕೆಟ್, ಕ್ಯಾಸಿನೋ ಸೇರಿ ಇತರೆ ಆಟಗಳಿಗೆ ದುಡ್ಡು ಕಟ್ಟಿ ದಿವಾಳಿಯಾಗಿದ್ದು, ಆನ್‌ ಲೈನ್ ಆ್ಯಪ್‌ ಗಳು ಹಾಗೂ ಅವುಗಳ ಡೀಲರ್‌ ಗಳಿಂದ ವಂಚನೆಗೆ ಒಳಗಾಗಿದ್ದು, ಆ್ಯಪ್ ಡೀಲರ್ ಮೈನುದ್ದೀನ್, ಚನ್ನಬಸವ, ರುದ್ರಗೌಡ, ಹನುಮನಗೌಡ ಅವರಿಂದ ವಂಚನೆಯಾಗಿದೆ ಎಂದು ಆರೋಪಿಸಿದ್ದಾನೆ.

Also Read  ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಅಂಗಡಿಗಳಿಗೆ ಬೆಂಕಿ ►ಲಕ್ಷಾಂತರ ಮೌಲ್ಯದ ವಸ್ತುಗಳು ಭಸ್ಮ

 

error: Content is protected !!