ಮೂಲಭೂತ ಸೌಕರ್ಯಗಳನ್ನು ಒದಗಿಸಿಲ್ಲವೆಂಬ ಆಕ್ರೋಶ ► ಕಾಂಗ್ರೆಸ್ ಶಾಸಕ ಇಕ್ಬಾಲ್ ಅನ್ಸಾರಿಗೆ ಚೊಂಬು, ಚಪ್ಪಲಿ ಎಸೆದ ಮಹಿಳೆಯರು

(ನ್ಯೂಸ್ ಕಡಬ) newskadaba.com ಕೊಪ್ಪಳ, ಫೆ.05. ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿಗೆ ಮಹಿಳೆಯರು ತಂಬಿಗೆ ಮತ್ತು ಚಪ್ಪಲಿ ಎಸೆದ ಘಟನೆ ಭಾನುವಾರ ರಾತ್ರಿ ನಡೆದಿದ್ದು ಈ ಮೂಲಕ ಶಾಸಕ ಇಕ್ಬಾಲ್​ ಅನ್ಸಾರಿಗೆ ಮತ್ತೊಮ್ಮೆ ಅವಮಾನವಾಗಿದೆ.

ಭಾನುವಾರ ರಾತ್ರಿ ಕೊಪ್ಪಳದ ಗಂಗಾವತಿ ನಗರದ 28 ನೇ ವಾರ್ಡ್​ ವೀಕ್ಷಣೆಗೆ ಹೋಗಿದ್ದ ಅನ್ಸಾರಿ ಅವರನ್ನು ಮಹಿಳೆಯರು ತರಾಟೆಗೆ ತೆಗೆದುಕೊಂಡಿದ್ದಾರೆ. ಸಮರ್ಪಕ ಶೌಚಾಲಯ ವ್ಯವಸ್ಥೆ ಇಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಅನ್ಸಾರಿ ಅವರ ಭಾಷಣಕ್ಕೆ ಮಹಿಳೆಯರು ಅಡ್ಡಿ ಪಡಿಸಿದ್ದು, ಮಹಿಳೆಯರನ್ನು ಸಮಾಧಾನ ಪಡಿಸಲು ಪೊಲೀಸರ ಪರದಾಡಿದ್ದಾರೆ. ಇದರಿಂದಾಗಿ ಅನ್ಸಾರಿ ಕಾರ್ಯಕ್ರಮದಿಂದ ಅರ್ಧಕ್ಕೆ ಹೊರ ನಡೆದಿದ್ದಾರೆ. ಈ ವೇಳೆ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರಿಂದ ಲಘು ಲಾಠಿ ಪ್ರಹಾರ ನಡೆಸಲಾಯಿತು. ಕಳೆದ ಜನವರಿ 28ರಂದು ಕೊಪ್ಪಳದಲ್ಲಿ ಮುಸ್ಲಿಂ ವರ್ತಮಾನ ಸವಾಲು ಎಂಬ ಕಾರ್ಯಕ್ರಮದಲ್ಲಿ ಅನ್ಸಾರಿ ಅವರ ಭಾಷಣ ಮಾಡುತ್ತಾ ಸಿಎಂ ಸಿದ್ದರಾಮಯ್ಯ ಅವರ ಕೈ ಬಲ ಪಡಿಸಿ ಎಂದಿದ್ದಕ್ಕೆ ಅವರ ವಿರುದ್ಧ ಯುವಕರು ಆಕ್ರೋಶ ವ್ಯಕ್ತಪಡಿಸಿದ್ದರು. ಅನ್ಸಾರಿ ಅವರು ಮುಖ್ಯಮಂತ್ರಿ ಹೆಸರು ಹೇಳುತ್ತಿದ್ದಂತೆ ಯುವಕರು ಕಾರ್ಯಕ್ರಮದಿಂದ ಹೊರ ನಡೆದಿದ್ದ ವಿಡಿಯೋ ಭಾನುವಾರವಷ್ಟೇ ಬಹಿರಂಗವಾಗಿತ್ತು.

Also Read  ಉಪ್ಪಿನಂಗಡಿ: ಕಾರಿಗೆ ಢಿಕ್ಕಿ ಹೊಡೆದು ರಿಕ್ಷಾ ಪಲ್ಟಿ

error: Content is protected !!
Scroll to Top