‘ಹರ್ ಘರ್ ತಿರಂಗ’ ಅಭಿಯಾನ 2.0 ಆರಂಭ – ಅಂಚೆ ಕಚೇರಿಗಳಲ್ಲಿ 25 ರೂ.ಗೆ ರಾಷ್ಟ್ರಧ್ವಜ ಲಭ್ಯ

(ನ್ಯೂಸ್ ಕಡಬ)newskadaba.com ನವದೆಹಲಿ, ಆ.11. ಸ್ವಾತಂತ್ರ್ಯದ 75ನೇ ವಾರ್ಷಿಕೋತ್ಸವದ ಪ್ರಯುಕ್ತ ಕಳೆದ ವರ್ಷ ಪ್ರಧಾನಿ ಮೋದಿ ಅವರು ಆಜಾದಿ ಕಾ ಅಮೃತ್ ಮಹೋತ್ಸವ ಅಂಗವಾಗಿ ‘ಹರ್ ಘರ್ ತಿರಂಗ’ ಅಭಿಯಾನ ಯಶಸ್ವಿಯಾದ ಹಿನ್ನಲೆಯಲ್ಲಿ ಸರ್ಕಾರ ಹರ್ ಘರ್ ತಿರಂಗನ್ ಅಭಿಯಾನ 2.0 ಆರಂಭಿಸಿದೆ. ಹರ್ ಘರ್ ತಿರಂಗನ್ ಅಭಿಯಾನ 2.0 ರ ಭಾಗವಾಗಿ, ನಾಗರಿಕರು ತಮ್ಮ ಹತ್ತಿರದ ಅಂಚೆ ಕಛೇರಿಯಿಂದ ಕಳೆದ ವರ್ಷದಂತೆ ಕೇವಲ ರೂ. 25 ವೆಚ್ಚದಲ್ಲಿ ರಾಷ್ಟ್ರಧ್ವಜವನ್ನು ಖರೀದಿಸಬಹುದು ಎಂದು ಸರ್ಕಾರ ಘೋಷಿಸಿದೆ.

13 ಲಕ್ಷ ತ್ರಿವರ್ಣ ದ್ವಜ ಮಾರಾಟವಾದ ಹಿಂದಿನ ವರ್ಷದ ಅದ್ಭುತ ಯಶಸ್ಸಿನ ನಂತರ ಸರ್ಕಾರವು ‘ ಹರ್ ಘರ್ ತಿರಂಗ ಅಭಿಯಾನ 2.0’ ಅನ್ನು ಪ್ರಾರಂಭಿಸಿದೆ. ಈ ಕ್ರಮದ ಮೂಲಕ ನಾಗರಿಕರಲ್ಲಿ ದೇಶಭಕ್ತಿ ಮತ್ತು ರಾಷ್ಟ್ರೀಯ ಹೆಮ್ಮೆಯನ್ನು ಉತ್ತೇಜಿಸುವ ಗುರಿಯನ್ನು ಸರ್ಕಾರ ಹೊಂದಿದೆ. ನಾಗರೀಕರು ಅಧಿಕೃತ ವೆಬ್‌ಸೈಟ್ www.epostoffice.gov.in ಮೂಲಕ ತ್ರಿವರ್ಣ ಧ್ವಜವನ್ನು ಆನ್‌ಲೈನ್‌ ನಲ್ಲಿ ಆರ್ಡರ್ ಮಾಡಬಹುದು. ಅಥವಾ ತಮ್ಮ ಹತ್ತಿರದ ಅಂಚೆ ಕಛೇರಿಯಿಂದಲೂ ರಾಷ್ಟ್ರ ದ್ವಜ ಖರೀದಿಸಬಹುದಾಗಿದೆ. ಮ್ಮ ಆನ್‌ಲೈನ್‌ನಲ್ಲಿ ಪ್ರತಿಯೊಬ್ಬ ಬಳಕೆದಾರರು ಗರಿಷ್ಠ 5 ಫ್ಲ್ಯಾಗ್‌ಗಳನ್ನು ಆರ್ಡರ್ ಮಾಡಬಹುದಾಗಿದೆ.

Also Read  ದ. ಕ. ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ➤ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ

 

error: Content is protected !!
Scroll to Top