ಕಡಬ: ಕೊಯಿಲ ಸಂತ್ರಸ್ತರ ಪುನರ್ವಸತಿ ಕೇಂದ್ರ ಪರಿಶೀಲನೆ

(ನ್ಯೂಸ್ ಕಡಬ)newskadaba.com ಕಡಬ, ಆ.11. ಕಡಬ ತಾಲೂಕು ಕೊಯಿಲ ಎಂಡೋ ಸಂತ್ರಸ್ತರ ಪುನರ್ವಸತಿ ಕೇಂದ್ರಕ್ಕೆ ರಾಷ್ಟ್ರೀಯ ಮಾನವ ಹಕ್ಕುಗಳ ವಿಶೇಷ ಮೇಲ್ವಿಚಾರಕರಾದ ಡಾ. ಯೋಗೇಶ್ ದುಬೆ ಅವರು ಭೇಟಿ ನೀಡಿ ಪರಿಶೀಲಿಸಿದರು ಎನ್ನಲಾಗಿದೆ. ಎಂಡೋ ಬಾಧಿತರ ಅಂಕಿ ಅಂಶ, ಸಂತ್ರಸ್ಥರಿಗೆ ನೀಡಲಾಗುವ ಸೌಲಭ್ಯದ ಬಗ್ಗೆ ಪುತ್ತೂರು ತಾಲೂಕು ಅರೋಗ್ಯಾಧಿಕಾರಿ ಡಾ. ದೀಪಕ್ ರೈ ಮಾಹಿತಿ ನೀಡಿದರು.

ಪುನರ್ವಸತಿ ಕೇಂದ್ರವನ್ನು ಮುನ್ನಡೆಸುತ್ತಿರುವ ಬೆಳ್ತಂಗಡಿ ನರಿಯ ಸಿಯೋನ್ ಆಶ್ರಮ ಟ್ರಸ್ಟ್ ನ ವ್ಯವಸ್ಥಾಪಕ ಜಾಕ್ಸನ್ ಪುನರ್ವಸತಿ ಕೇಂದ್ರದ ಕಾರ್ಯವೈಖರಿ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭ ಜಿಲ್ಲಾ ವಿಕಲಚೇತನರ ಕಲ್ಯಾಣಧಿಕಾರಿ ಗೋಪಾಲಕೃಷ್ಣ, ಪುತ್ತೂರು ತಾಲೂಕು ಪಂಚಾಯತ್‍ನ ಕಾರ್ಯನಿರ್ವಾಹಣಾಧಿಕಾರಿ ನವೀನ್ ಭಂಡಾರಿ, ಎಂಡೋಸಲ್ಫಾನ್ ಜಿಲ್ಲಾ ಕೋಅರ್ಡಿನೇಟರ್ ಸಾಜುದ್ದಿನ್, ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯ ಡಾ. ಪ್ರಯಾಗ್, ತನುಜ, ಸೀತಮ್ಮ, ಪುನರ್ವಸತಿ ಕೇಂದ್ರ ಸಿಬ್ಬಂದಿಗಳಾದ ರಜಿನ್, ಸಮಿತಾ, ಶೈನಿ, ಯಶ್ವಿತಾ ಮೊದಲಾದವರು ಇದ್ದರು ಎಂದು ವರದಿಯಾಗಿದೆ.

Also Read  ಚುನಾವಣೆ ಗೆಲುವಿಗೆ ಸಂಬಂಧಿಸಿದಂತೆ ಪಣ ಕಟ್ಟಿಕೊಂಡ ರೈತರು.!   ➤ತಲಾ ಒಂದು ಎಕರೆ ಜಮೀನನ್ನು ಜಿದ್ದಿಗೆ!

 

error: Content is protected !!
Scroll to Top