(ನ್ಯೂಸ್ ಕಡಬ)newskadaba.com ಉಳ್ಳಾಲ, ಆ.11. ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಉಳ್ಳಾಲದ ಸುಂದರೀಭಾಗ್ ನಿವಾಸಿ ನವಾಜ್ ಉಳ್ಳಾಲ ಎಂಬಾತನನ್ನು ಪೋಕ್ಸೋ ಕಾಯಿದೆ ಅಡಿ ಬಂಧಿಸಲಾಗಿತ್ತು. ಆರೋಪಿ ಬಾಲಕಿಗೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆಂದು ತನಿಖೆ, ಸಾಕ್ಷ್ಯಾಧಾರಗಳಿಂದ ದೃಢಪಟ್ಟಿದೆ ಎಂದು ಪೋಲೀಸರು ಚಾರ್ಜ್’ಶೀಟನ್ನು ಮಂಗಳೂರಿನ ಗೌರವಾನ್ವಿತ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ(ಎಫ್.ಟಿ.ಎಸ್.ಸಿ -I) ನ್ಯಾಯಾಲಯಕ್ಕೆ ಸಲ್ಲಿಸಿದ್ದರು ಎನ್ನಲಾಗಿದೆ.
ಈ ಕುರಿತಾದ ಆರೋಪಗಳಂತೆ ಸಾಕ್ಷಿ ವಿಚಾರಣೆ ನಡೆಸಿದ ಘನ ನ್ಯಾಯಾಲಯವು, ಸಾಕ್ಷಿ ವಿಚಾರಣೆ, ವಾದ ಪ್ರತಿವಾದಗಳನ್ನು ಆಲಿಸಿದ ನಂತರ ಆರೋಪಿ ವಿರುದ್ದದ ಆರೋಪಗಳು ನಾಸಾಬೀತಾದ ಹಿನ್ನಲೆಯಲ್ಲಿ ಆರೋಪಿ ನವಾಜ್ ಉಳ್ಳಾಲ ನನ್ನು ಸದ್ರಿ ಪ್ರಕರಣದಿಂದ ಖುಲಾಸೆಗೊಳಿಸಿ ಬಿಡುಗಡೆ ಮಾಡಿರುತ್ತದೆ. ಆರೋಪಿ ಪರವಾಗಿ ಯುವ ನ್ಯಾಯವಾದಿ ಇಸ್ಮಾಯಿಲ್ ಶಾಫಿ ಬೈಕಂಪಾಡಿ ವಾದ ಮಂಡಿಸಿರುತ್ತಾರೆ.