(ನ್ಯೂಸ್ ಕಡಬ)newskadaba.com ಸ್ಯಾನ್ ಫ್ರಾನ್ಸಿಸ್ಕೋ, ಆ.11. ಟ್ವಿಟರ್ ಕಂಪನಿಯ ಹೆಸರನ್ನು ಎಕ್ಸ್ ಎಂದು ಬದಲಾಯಿಸಿದ ನಂತರ ಎಲೋನ್ ಮಸ್ಕ್ ಟ್ವಿಟರ್ ಕಚೇರಿಯಲ್ಲಿನ ಹಳೆಯ ಲೋಗೊಗಳು ಮತ್ತು ವಸ್ತುಗಳನ್ನು ಹರಾಜಿಗಿಟ್ಟಿದ್ದು, ತಂತ್ರಜ್ಞಾನ ಉದ್ಯಮದ ಬಿಲಿಯನೇರ್ ಎಲೋನ್ ಮಸ್ಕ್ ಟ್ವಿಟರ್ ಕಟ್ಟಡದಲ್ಲಿನ ಲೋಗೊಗಳು ಮತ್ತು ವಸ್ತುಗಳನ್ನು ಹರಾಜಿಗೆ ಇಟ್ಟಿದ್ದಾರೆ ಎನ್ನಲಾಗಿದೆ.
ಟ್ವಿಟರ್ಗೆ ಎಕ್ಸ್ ಎಂದು ಮರುನಾಮಕರಣ ಮಾಡಿದ ಕೆಲವೇ ವಾರಗಳ ನಂತರ ಮಸ್ಕ್ ಟ್ವಿಟರ್ ಹೆಸರು ಲೋಗೊ ಇರುವ ಎಲ್ಲ ವಸ್ತುಗಳನ್ನು ಕಚೇರಿಯಿಂದ ಆಚೆ ದಬ್ಬುತ್ತಿದ್ದಾರೆ. ಸ್ಮರಣಿಕೆಗಳು, ಕಲಾತ್ಮಕ ವಸ್ತುಗಳು, ಕಚೇರಿ ಸ್ವತ್ತುಗಳು ಮತ್ತು ಇನ್ನೂ ಹಲವಾರು ವಸ್ತುಗಳ ಹರಾಜು!’ ಎಂಬ ಹರಾಜು ಬಿಡ್ಡಿಂಗ್ ಪ್ರಾರಂಭವಾಗಲಿದ್ದು, ಎರಡು ದಿನಗಳಲ್ಲಿ ಮುಗಿಸಲು ಯೋಜಿಸಲಾಗಿದೆ ಎಂದು ವರದಿಯಾಗಿದೆ.