ಬೊಳುವಾರು: ಗುಜಿರಿ ಅಂಗಡಿಗೆ ಬೆಂಕಿ

(ನ್ಯೂಸ್ ಕಡಬ) newskadaba.com ಪುತ್ತೂರು, ಫೆ.05. ಇಲ್ಲಿನ ಬೊಳುವಾರು ಸಮೀಪವಿರುವ ಗುಜಿರಿ ಅಂಗಡಿಗೆ ಬೆಂಕಿ ತಗುಲಿ ಸಾವಿರಾರು ರೂಪಾಯಿ ನಷ್ಟ ಸಂಭವಿಸಿದ ಘಟನೆ ಭಾನುವಾರದಂದು ಮಧ್ಯಾಹ್ನ ನಡೆದಿದೆ.

ಘಟನೆಯ ಬಗ್ಗೆ ಮಾಹಿತಿ ಅರಿತ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು ಅವರು ಸ್ಥಳಕ್ಕಾಗಮಿಸಿ ಸ್ಥಳೀಯರ ನೆರವಿನಿಂದ ಬೆಂಕಿ ನಂದಿಸುವ ಕಾರ್ಯ ನಡೆಸಿದ್ದಾರೆ. ಬೆಂಕಿ ಇನ್ನಷ್ಟು ವಿಪರೀತವಾಗುತ್ತಿದ್ದ ಹಿನ್ನೆಲೆಯಲ್ಲಿ ಮುಂಜಾಗರೂಕತಾ ಕ್ರಮವಾಗಿ ಸ್ಥಳೀಯ ಮನೆಗಳಲ್ಲಿ ನಿಲ್ಲಿಸಲಾಗಿದ್ದ ವಾಹನಗಳನ್ನು ಅಲ್ಲಿಂದ ತೆರವುಗೊಳಿಸುವಂತೆ ಅಧಿಕಾರಿಗಳು ಸೂಚಿಸಿದ್ದರು. ಘಟನಾ ಸ್ಥಳದಲ್ಲಿ ನರೆದಿದ್ದವರನ್ನು ಚದುರಿಸಲು ಪುತ್ತೂರು ನಗರಠಾಣಾ ಪೊಲೀಸರು ಹರಸಾಹಸಪಟ್ಟರು. ಅಗ್ನಿ ಅನಾಹುತಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.

Also Read  ನಾಳೆಯಿಂದ ಕಡಬದಲ್ಲಿ 1326 ನೇ ಮದ್ಯವರ್ಜನ ಶಿಬಿರ

error: Content is protected !!
Scroll to Top