ಬಾಕಿ ವಿದ್ಯುತ್ ಬಿಲ್​​ ಕಟ್ಟುವಂತೆ ಮೊಬೈಲ್‌ ಗೆ ಲಿಂಕ್‌ ! – 5.48 ಲಕ್ಷ ರೂ. ಡ್ರಾ ಮಾಡಿದ ವಂಚಕರು

(ನ್ಯೂಸ್ ಕಡಬ)newskadaba.com ಮೈಸೂರು, ಆ.11. ದೂರವಾಣಿ ಕರೆ ಮಾಡಿ ಬಾಕಿ ವಿದ್ಯುತ್ ಬಿಲ್ ಕಟ್ಟುವಂತೆ ಹೇಳಿ ವ್ಯಕ್ತಿಯೊಬ್ಬರ ಖಾತೆಯಿಂದ​ ಬರೋಬ್ಬರಿ 5.48 ಲಕ್ಷ ರೂ. ದೋಚಿರುವ ಘಟನೆ ಬೆಳಕಿಗೆ ಬಂದಿದೆ. ಕಣ್ಣನ್ ಎಂಬುವರಿಗೆ ವಂಚಕರು ದೂರವಾಣಿ ಕರೆ ವಿದ್ಯುತ್ ಬಿಲ್ ಬಾಕಿ ಇದ್ದು, ಲಿಂಕ್​ ಮೂಲಕ ಪಾವತಿಸುವಂತೆ ಸೂಚಿಸಿದ್ದಾರೆ.

ಇನ್ನು ಕರೆ ಕಡಿತಗೊಳಿಸಿದ ಬಳಿಕ ಕಣ್ಣನ್ ಅವರ ಫೋನ್ ​ಗೆ ಲಿಂಕ್ ಕಳುಹಿಸಿ ಹಣ ಪಾವತಿಸುವಂತೆ ಹೇಳಿದ್ದು, ಅದರಂತೆ ಕಣ್ಣನ್ ಅವರು ಸಹ ವಂಚಕರು ಕಳುಹಿಸಿದ್ದ ಲಿಂಕ್​ ಮೇಲೆ ಕ್ಲಿಕ್​ ಮಾಡಿದ್ದಾರೆ. ಬಳಿಕ ವಂಚಕರು ಲಿಂಕ್ ಮೂಲಕ ಸಂಪೂರ್ಣ ಮಾಹಿತಿ ಪಡೆದು ಖಾತೆಯಿಂದ 5,48,149 ರೂ. ಡ್ರಾ ಮಾಡಿಕೊಂಡಿದ್ದಾರೆ. ಹಣ ಡ್ರಾ ಆಗಿರುವ ಮೆಸೇಜ್ ನೋಡಿ ಕಣ್ಣನ್​ ಅವರು ಕೂಡಲೇ ಮೈಸೂರು ಸೈಬರ್ ಪೊಲೀಸ್ ಠಾಣೆಗೆ ತೆರೆಳಿ ದೂರು ದಾಖಲಿಸಿದ್ದಾರೆ.

Also Read  ಘಾಟಿ ತಿರುವಿನಲ್ಲಿ ಅಪಘಾತ - ಗಂಭೀರ ಗಾಯಗೊಂಡಿದ್ದ ಯುವತಿ ಮೃತ್ಯು

 

error: Content is protected !!
Scroll to Top