ಕಾರ್ಮಿಕರಿಗಿದ್ದ ಉಚಿತ ಬಸ್‌ಪಾಸ್‌ ಯೋಜನೆ ಸ್ಥಗಿತ…! – ರಾಜ್ಯ ಸರ್ಕಾರ

(ನ್ಯೂಸ್ ಕಡಬ)newskadaba.com ಬೆಂಗಳೂರು, ಆ.11. ಕಾರ್ಮಿಕ ವರ್ಗದ ಓಡಾಟಕ್ಕೆ ಇದ್ದ ರಿಯಾಯಿತಿ ಬಸ್‌ ಪಾಸ್‌ ಯೋಜನೆ ಸದ್ದಿಲ್ಲದೇ ಸ್ಥಗಿತಗೊಳಿಸಲಾಗುತ್ತಿದ್ದು, ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ತಂದ ಯೋಜನೆಯ ಮೂಲಕ ಉಚಿತ ಬಸ್ ಪಾಸು ಪಡೆದ ನೋಂದಾಯಿತ ಕಟ್ಟಡ ಮತ್ತು ಇತರೆ ನಿಮಾಣ ಕಾರ್ಮಿಕರು ಪಾಸಿನೊಂದಿಗೆ KSRTC ಯಲ್ಲಿ ಉಚಿತವಾಗಿ ಪ್ರಯಾಣಿಸಬಹುದಾಗಿತ್ತು. ಈ ಪಾಸ್‌ ಅವಧಿ 3 ತಿಂಗಳು ಚಾಲ್ತಿಯಲ್ಲಿದ್ದು, ನಂತರ ಪಾಸ್‌ ನವೀಕರಣ ಮಾಡಿಸಿಕೊಳ್ಳಬೇಕಾಗಿತ್ತು ಎನ್ನಲಾಗಿದೆ.

ಕಾರ್ಮಿಕರ‌‌ ವಿಚಾರದಲ್ಲಿ ಹಿಂದಿನ ಬಿಜೆಪಿ ಸರ್ಕಾರದ ಚುನಾವಣಾ ಗಿಮಿಕ್ ಮಾಡಿರುವುದು ಎಂಬ ನಿಲುವನ್ನು ಕಾಂಗ್ರೆಸ್ ಸರ್ಕಾರ ತಳೆದಿದೆ. ಈ ಹಿನ್ನೆಲೆಯಲ್ಲಿ ಹಿಂದಿನ ಬಿಜೆಪಿ ಸರ್ಕಾರ ಕಾರ್ಮಿಕರಿಗಾಗಿ ಜಾರಿಗೆ ತಂದಿದ್ದ ನಗರ ಹಾಗೂ ಗ್ರಾಮೀಣ ಭಾಗದಿಂದ 45 ಕಿಮೀ ದೂರದವರೆಗೆ ಓಡಾಡಲು ಉಚಿತ ಬಸ್ ಪಾಸ್ ಯೋಜನೆಯನ್ನು ಸರ್ಕಾರ ಸ್ಥಗಿತಗೊಳಿಸಿದೆ. ಸರ್ಕಾರ ಮಾರ್ಚ್ 31ರ ನಂತರ ಪಾಸ್ ವಿತರಿಸದಂತೆ ಹಾಗೂ ಅಂತಹ ಪಾಸ್‌ಗಳಿಗೆ ಪ್ರಯಾಣಕ್ಕೆ ಅವಕಾಶ ನೀಡದಂತೆ ಸಾರಿಗೆ ಸಂಸ್ಥೆಗೆ ಸೂಚನೆ ನೀಡಿದೆ ಎನ್ನಲಾಗಿದೆ.

Also Read  ಮರಕ್ಕೆ ಢಿಕ್ಕಿ ಹೊಡೆದ ಖಾಸಗಿ ಶಾಲಾ ಬಸ್..!! ➤ ಚಾಲಕ ಹಾಗೂ ಮಕ್ಕಳಿಗೆ ಗಾಯ

 

error: Content is protected !!
Scroll to Top