ಮಹಿಳೆಯ ಮೇಲೆ ಉಬರ್ ಚಾಲಕನಿಂದ ಹಲ್ಲೆ

(ನ್ಯೂಸ್ ಕಡಬ)newskadaba.com ಬೆಂಗಳೂರು, ಆ.10. ನಗರದಲ್ಲಿ ಖಾಸಗಿ ಟ್ಯಾಕ್ಸಿ ಬುಕ್ಕಿಂಗ್ ಆಪ್ ಗಳ ಹಾವಳಿ ಹೆಚ್ಚಾದ ಬೆನ್ನಲ್ಲೇ, ಅಘಾತಕಾರಿ ಘಟನೆಗಳು ನಡೆಯುತ್ತಿವೆ. ಉಬರ್ ಕ್ಯಾಬ್ ಹತ್ತಿದಂತ ಮಹಿಳೆಯ ಮೇಲೆ ಚಾಲಕ ಹಲ್ಲೆ ಮಾಡಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ.

ಬೆಂಗಳೂರಿನ ಮಹಿಳೆಯೊಬ್ಬರು ಆಸ್ಪತ್ರೆಗೆ ತೆರಳಲು ಕ್ಯಾಬ್ ಬುಕ್ ಮಾಡಿದ್ದರು. ಮಹಿಳೆ ಬುಕ್ ಮಾಡಿದ್ದೇ ಬೇರೆ ಕ್ಯಾಬ್, ಸ್ಥಳಕ್ಕೆ ಬಂದಿದ್ದೇ ಬೇರೆಯಾಗಿತ್ತು. ಇದನ್ನು ಆರಂಭದಲ್ಲಿ ಗಮನಿಸದಂತ ಮಹಿಳೆ ಹಾಗೂ ಅವರ ಪುತ್ರ ಹತ್ತಿ ಕುಳಿತ ಮೇಲೆ ಗಮನಿಸಿ ಇಳಿಯೋದಕ್ಕೆ ಪ್ರಯತ್ನಿಸಿದ್ದಾರೆ. ಹೀಗೆ ಬೇರೆ ಕ್ಯಾಬ್ ಎಂಬುದಾಗಿ ಅರಿತಂತ ಮಹಿಳೆ ಕಾರಿನಿಂದ ಇಳಿದಾಗ, ಕಾರು ನಿಲ್ಲಿಸಿದಂತ ಕ್ಯಾಬ್ ಚಾಲಕ ಮಹಿಳೆಯ ಮೇಲೆ ಹಲ್ಲೆ ನಡೆಸಿರುವಂತ ಘಟನೆ ಬೆಂಗಳೂರಿನ ಬೋಗನಹಳ್ಳಿ ಬಳಿಯಲ್ಲಿ ನಡೆದಿದೆ.

Also Read  ನಾಡಪ್ರಭು ಕೆಂಪೇಗೌಡರು ಸದಾ ಸ್ಮರಣೀಯರು ➤ ವೇದವ್ಯಾಸ ಕಾಮತ್

ಕೂಡಲೇ ಅಲ್ಲಿದ್ದಂತ ಸ್ಥಳೀಯರು ದೌಡಾಯಿಸಿ, ಮಹಿಳೆಯನ್ನು ರಕ್ಷಿಸಿದ್ದಾರೆ. ಈ ಹಲ್ಲೆಯ ದೃಶ್ಯ ಅಪಾರ್ಮೆಂಟ್ ನಲ್ಲಿದ್ದಂತ ಸಿಸಿಟಿವಿಯಲ್ಲೂ ಸೆರೆಯಾಗಿದೆ. ಈ ಸಂಬಂಧ ಮಹಿಳೆ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದು, ಸೂಕ್ತ ಕ್ರಮಕ್ಕಾಗಿ ಪೊಲೀಸರಿಗೆ ಒತ್ತಾಯಿಸಿದ್ದಾರೆ.

 

 

error: Content is protected !!
Scroll to Top