‘ಕೇರಳಂ’ ಎಂದು ಮರುನಾಮಕರಣಕ್ಕೆ ಕೇಂದ್ರಕ್ಕೆ ಕೇರಳ ಸರ್ಕಾರ ಆಗ್ರಹ..!

(ನ್ಯೂಸ್ ಕಡಬ)newskadaba.com ಕೇರಳ, ಆ.10. ಕೇರಳದಲ್ಲಿನ ಆಡಳಿತಾರೂಢ ಎಡರಂಗ ಸರ್ಕಾರವು ಕೇರಳವನ್ನು ‘ಕೇರಳಂ’ ಎಂದು ಮರುನಾಮಕರಣ ಮಾಡುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿದೆ ಎಂದು ಪಿಟಿಐ ತಿಳಿಸಿದೆ.

ಈ ಸಂಬಂಧ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿಧಾನ ಸಭೆಯಲ್ಲಿ ನಿರ್ಣಯವೊಂದನ್ನು ಮಂಡಿಸಲು ಮುಂದಾಗಿದ್ದು, ಈ ನಿರ್ಣಯವು ಆ. 09ರ ಸದನ ಕಲಾಪಗಳ ವೇಳಾಪಟ್ಟಿಯಲ್ಲಿ ನಮೂದಾಗಿದೆ. ಈ ಮಾಹಿತಿಯು ಕೇರಳ ರಾಜ್ಯ ವಿಧಾನಸಭೆಯ ಅಂತರ್ಜಾಲ ತಾಣದಲ್ಲಿ ಅಪ್ಲೋಡ್ ಆಗಿದೆ. ಕೇರಳ ರಾಜ್ಯದ ಹೆಸರು ‘ಕೇರಳಂ’ ಎಂದು ಸಂವಿಧಾನ ಮತ್ತು ಎಲ್ಲ ಅಧಿಕೃತ ದಾಖಲೆಗಳಲ್ಲಿ ಮರುನಾಮಕರಣಗೊಳ್ಳಬೇಕು ಎಂಬವುದು ಕೇರಳ ಸರ್ಕಾರದ ಬೇಡಿಕೆಯಾಗಿದೆ.

Also Read  ಪ್ರಿಯಕರನೊಂದಿಗೆ ಸೇರಿ 3 ವರ್ಷದ ಮಗಳನ್ನು ಕೊಂದ ಪಾಪಿ ತಾಯಿ !

 

error: Content is protected !!
Scroll to Top