ರಾಜ್ಯ ಸರ್ಕಾರಿ ನೌಕರ’ರಿಗೆ ಶುಭಸುದ್ದಿ – ಶೀಘ್ರವೇ ‘NPS’ ರದ್ದು, ‘OPS’ ಜಾರಿ ?

(ನ್ಯೂಸ್ ಕಡಬ)newskadaba.com ಬೆಂಗಳೂರು, ಆ.10. ರಾಜ್ಯ ಸರ್ಕಾರಿ ನೌಕರರ ಮಹತ್ವದ ಬೇಡಿಕೆಯಲ್ಲಿ ಹೊಸ ಪಿಂಚಣಿ ವ್ಯವಸ್ಥೆ ರದ್ದುಗೊಳಿಸಿ, ಹಳೆ ಪಿಂಚಣಿ ವ್ಯಸ್ಥೆಯನ್ನು ಜಾರಿಗೊಳಿಸುವುದು ಆಗಿದ್ದು, ಇಂತಹ ನೌಕರರಿಗೆ ಈಗ ಶುಭ ಸುದ್ದಿಯೊಂದು ಹೊರಬಿದ್ದಿದೆ. ಶೀಘ್ರವೇ NPS ರದ್ದುಗೊಳಿಸಿ, OPS ಜಾರಿಗೊಳಿಸೋ ಸಾಧ್ಯತೆ ಇದೆ ಎನ್ನಲಾಗುತ್ತಿದೆ.


ರಾಜ್ಯ ವಿಧಾನಸಭೆಯ ಕಲಾಪದ ಸಂದರ್ಭದಲ್ಲಿ ಹಲವು ಸದಸ್ಯರು ರಾಜ್ಯ ಸರ್ಕಾರಕ್ಕೆ ಕೇಳಿದಂತ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿ, ಸರ್ಕಾರದ ಮುಂದೆ ಹೊಸ ಪಿಂಚಣಿ ವ್ಯವಸ್ಥೆ ರದ್ದುಗೊಳಿಸಿ, ಹಳೆ ಪಿಂಚಣಿ ವ್ಯವಸ್ಥೆ ಜಾರಿಗೊಳಿಸೋ ಯಾವುದೇ ಪ್ರಸ್ತಾಪ ಇಲ್ಲ ಎಂಬುದಾಗಿ ತಿಳಿಸಿತ್ತು. ಕೇಂದ್ರ ಸರ್ಕಾರ ಅಧಿಕೃತ ಜ್ಞಾಪನ ದಿನಾಂಕ 03-03-2023 ರನ್ವಯ ರಾಜ್ಯ ಸರ್ಕಾರದ ನೌಕರರಿಗೂ ಒಪಿಎಸ್ ಗೆ ಒಳಪಡಿಸುವಂತೆ ಕೋರಿ ಮನವಿಗಳು ಸ್ವೀಕೃತವಾಗಿದ್ದು, ಕಡತ ಪರಿಶೀಲಿಸಲಾಗುತ್ತಿದೆ ಎಂದು ಆರ್ಥಿಕ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ತಿಳಿಸಿದ್ದಾರೆ.

Also Read  ಶಿವಮೊಗ್ಗ: ಬಾಂಬ್ ಸ್ಫೋಟಗೊಂಡು ಹಲವರಿಗೆ ಗಾಯ

error: Content is protected !!
Scroll to Top