ಯುವತಿಯ ಮಾತಿಗೆ ಮರುಳಾಗಿ 23,000ರೂ.ಕಳೆದುಕೊಂಡ ಚಾಲಕ

(ನ್ಯೂಸ್ ಕಡಬ)newskadaba.com ಬೆಂಗಳೂರು, ಆ.10. ಫೋನ್‌ ಪೇ ಮಾಡುವುದಾಗಿ ನಂಬಿಸಿ ಅಂಗವಿಕಲ ಆಟೋ ಚಾಲಕನಿಂದ 23,500 ರೂ. ಪಡೆದು ಮಹಿಳಾ ಪ್ರಯಾಣಿಕರೊಬ್ಬರು ವಂಚಿಸಿರುವ ಘಟನೆ ವರದಿಯಾಗಿದೆ.


ನಾಗರಭಾವಿ ಸಮೀಪದ ಮಹದೇಶ್ವರ ಲೇಔಟ್‌ ನಿವಾಸಿ ಶಿವಕುಮಾರ್‌ ಮೋಸ ಹೋಗಿದ್ದು, ಶಿವಕುಮಾರ್‌ ಅವರ ಆಟೋದಲ್ಲಿ ಚಂದ್ರಾಲೇಔಟ್‌ ನಿಂದ ಬನಶಂಕರಿಗೆ ತೆರಳುತ್ತಿದ್ದ ಯುವತಿ ವಂಚಿಸಿದ್ದಾಳೆ ಎನ್ನಲಾಗಿದೆ. ಈ ಬಗ್ಗೆ ಸಂತ್ರಸ್ತ ಚಾಲಕ ನೀಡಿದ ದೂರಿನ ಮೇರೆಗೆ ಎಫ್‌ಐಆರ್‌ ದಾಖಲಿಸಿ ಆರೋಪಿ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ.


ಆಟೋ ಚಾಲಕ ಶಿವಕುಮಾರ್‌ ಎಂದಿನಂತೆ ಇದೇ ತಿಂಗಳ 4ರಂದು ಬಾಡಿಗೆ ಮಾಡಲು ತೆರಳಿದ್ದರು.ಆಗ ಚಂದ್ರಾಲೇಔಟ್‌ ಬಳಿ ಅವರ ಆಟೋಗೆ ಯುವತಿಯೊಬ್ಬಳು ಹತ್ತಿದ್ದು, ಬನಶಂಕರಿಗೆ ಹೋಗಬೇಕು ಎಂದು ಹೇಳಿದ್ದಾರೆ.ಬಳಿಕ ಮಾರ್ಗ ಮಧ್ಯೆ ತನಗೆ ಹೊಸಕೆರೆಹಳ್ಳಿಯ ಪಿಇಎಸ್‌ ಕಾಲೇಜಿನಲ್ಲಿ ಶುಲ್ಕ ಪಾವತಿಸಲು ನಗದು ಹಣ ಬೇಕಿದೆ. ನಾನು ಫೋನ್‌ ಪೇ ಮಾಡುತ್ತೇನೆ ಎಂದು ಶಿವಕುಮಾರ್‌ ಬಳಿ ಹಣಕ್ಕೆ ಆರೋಪಿ ಮನವಿ ಮಾಡಿದ್ದಾಳೆ.

Also Read  ಸುಬ್ರಹ್ಮಣ್ಯ: ಕಸ್ತೂರಿ ರಂಗನ್ ವಿರುದ್ಧ ಬೃಹತ್ ಪ್ರತಿಭಟನೆಗೆ ಜನಜಾಗೃತಿ ಸಭೆ ನಿರ್ಧಾರ

 

error: Content is protected !!
Scroll to Top