SSLC ವಿದ್ಯಾರ್ಥಿನಿ ಹೃದಯಾಘಾತದಿಂದ ಮೃತ್ಯು

(ನ್ಯೂಸ್ ಕಡಬ)newskadaba.com ಚಾಮರಾಜನಗರ, ಆ.10. SSLC ವಿದ್ಯಾರ್ಥಿನಿ ಕುಸಿದು ಬಿದ್ದು ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ವಿದ್ಯಾರ್ಥಿನಿ ಫಿಲಿಶ್(15) ಎಂದು ಗುರುತಿಸಲಾಗಿದೆ.

ಪಟ್ಟಣದ ನಿರ್ಮಲ ಕಾನ್ವೆಂಟ್ ಶಾಲೆಯಲ್ಲಿ ರಾಷ್ಟ್ರಗೀತೆ ಹಾಡುವಾಗ ಫಿಲಿಸಾ ಏಕಾಏಕಿ ಕುಸಿದು ಬಿದ್ದಿದ್ದಾಳೆ. ಕೂಡಲೇ ಶಾಲಾ ಸಿಬ್ಬಂದಿ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ವೇಳೆ ಫಿಲಿಶ್ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಫಿಲಿಶ್ ಬೆಂಗಳೂರಿನ ನಿವಾಸಿಯಾಗಿದ್ದು, ಹೆತ್ತವರ ನಿಧನದ ಬಳಿಕ ಐದು ವರ್ಷಗಳ ಹಿಂದೆ ಅನಾಥಾಲಯಕ್ಕೆ ಇವರು ಸೇರ್ಪಡೆಗೊಂಡಿದ್ದರು ಎಂದು ನಿಲಯ ಪಾಲಕರಾದ ಸೆಲ್ವರಾಜ್ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

Also Read  ಉಡುಪಿ : ಮುದ್ದು ಮಗಳಿಗೆ "ಕನ್ನಡ" ವೆಂದು ನಾಮಕರಣ

error: Content is protected !!
Scroll to Top