ಲಕ್ಷಾಂತರ ಮೌಲ್ಯದ ಸೆಂಟ್ರಿಂಗ್‌ ಶೀಟ್‌ಗಳ ಕಳವು..!

(ನ್ಯೂಸ್ ಕಡಬ)newskadaba.com ಉಳ್ಳಾಲ, ಆ.10. ಲಕ್ಷಾಂತರ ಮೌಲ್ಯದ ಸೆಂಟ್ರಿಂಗ್‌ ಶೀಟ್‌ ಗಳನ್ನು ಕಳವು ನಡೆಸಿರುವ ಘಟನೆ ನೂತನ ಮಂದಿರದ ವಠಾರದಿಂದ ಇಂದು ಸಂಭವಿಸಿದ್ದು, ಗುತ್ತಿಗೆದಾರ ತೊಕ್ಕೊಟ್ಟು ನಿವಾಸಿ ಸುಂದರ ಗಟ್ಟಿ ಎಂಬವರು ಬಾಡಿಗೆಗೆ ತಂದಿದ್ದ 2.5 ಲಕ್ಷ ರೂ.ಗಳ 119 ತಗಡು ಶೀಟುಗಳನ್ನು ಕಳವು ನಡೆಸಲಾಗಿದೆ.


ನಸುಕಿನ 2 ಗಂಟೆಯಿಂದ 3 ಗಂಟೆಯೊಳಗೆ ಕೃತ್ಯ ನಡೆದಿರುವುದಾಗಿ ತಿಳಿದುಬಂದಿದೆ. ಸ್ಥಳೀಯ ಸಿಸಿಟಿವಿ ಆಧಾರದಲ್ಲಿ ಪಿಕಪ್‌ ವಾಹನವನ್ನು ಬಳಸಿಕೊಂಡು ಕೃತ್ಯ ಎಸಗಿರುವುದಾಗಿಯೂ ಗೊತ್ತಾಗಿದೆ. ಕೊಲ್ಯ ಶ್ರೀ ಶಾರದ ಉತ್ಸವ ಸಮಿತಿಯವರ ನೂತನ ಮಂದಿರ ನಿರ್ಮಾಣ ಕಾಮಗಾರಿ ಜರಗುತ್ತಿದ್ದು, ಗುತ್ತಿಗೆದಾರ ಸುಂದರ ಗಟ್ಟಿ ಶೀಟುಗಳನ್ನು ಬಾಡಿಗೆಗೆ ಪಡೆದುಕೊಂಡು ತಂದಿರಿಸಿದ್ದು, ಈ ಕುರಿತು ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.

Also Read  ಏರ್ಪೋರ್ಟ್ ಮಾದರಿಯಲ್ಲಿ ಮೆಜೆಸ್ಟಿಕ್ ರೈಲು ನಿಲ್ದಾಣ ಅಭಿವೃದ್ಧಿ: ವಿ.ಸೋಮಣ್ಣ

error: Content is protected !!
Scroll to Top