ಟೊಮೆಟೋ ಹಾರ ಹಾಕಿ ಸದನಕ್ಕೆ ಬಂದ ಎಎಪಿ ಸಂಸದ..!

(ನ್ಯೂಸ್ ಕಡಬ)newskadaba.com ನವದೆಹಲಿ, ಆ.10. ಆಮ್ ಆದ್ಮಿ ಪಕ್ಷದ ಸಂಸದ ಸುಶೀಲ್ ಕುಮಾರ್ ಗುಪ್ತಾ ಅವರು ಸದನದೊಳಗೆ ಟೊಮೆಟೊ ಹಾರ ಧರಿಸಿ ಪ್ರವೇಶಿಸಿದ್ದಾರೆ. ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್ಕರ್ ಅವರು ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ದಿನದ ಅಧಿವೇಶನದ ಪ್ರಾರಂಭ ಮತ್ತು ಪಟ್ಟಿ ಮಾಡಲಾದ ಕಾರ್ಯ ಸೂಚಿಯ ಪ್ರಾರಂಭದ ನಂತರ, ಟೊಮೆಟೊ ಹಾರ ಹಾಕಿದ್ದ ಸುಶೀಲ್‌ ಕುಮಾರ್‌ ಗುಪ್ತಾ ಅವರ ಈ ನಡವಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದರು.


ರಾಜ್ಯಸಭೆಯ ಅಧ್ಯಕ್ಷನಾಗಿ, ಗೌರವಾನ್ವಿತ ಸದಸ್ಯರಾದ ಸುಶೀಲ್ ಗುಪ್ತಾ ಅವರು ಬಂದ ರೀತಿಯನ್ನು ನೋಡಿ ನನಗೆ ತುಂಬಾ ನೋವಾಗಿದೆ” ಎಂದು ಧನಕರ್ ಹೇಳಿದ್ದು, ಈ ಬಗ್ಗೆ ವಿರೋಧ ಪಕ್ಷದ ನಾಯಕರ ಜತೆ ಚರ್ಚಿಸುತ್ತೇನೆ ಎಂದು ಅವರು ಹೇಳಿದರು. ಕೆಲವು ಅಗತ್ಯ ವಸ್ತುಗಳ ಬೆಲೆಗಳು, ವಿಶೇಷವಾಗಿ ಟೊಮೆಟೊಗಳ ಬೆಲೆ ಏರಿಕೆ ವಿಚಾರವಾಗಿ ಕೇಂದ್ರ ಸರ್ಕಾರವು ವಿರೋಧ ಪಕ್ಷಗಳಿಂದ ಟೀಕೆಗಳನ್ನು ಎದುರಿಸುತ್ತಿದ್ದು, ಈ ಹಿನ್ನಲೆ ಬೆಲೆ ಏರಿಕೆ ವಿರೋಧಿಸಿ ಗುಪ್ತಾ ಅವರು ಟೊಮೆಟೊದಿಂದ ಮಾಡಿದ ಹಾರವನ್ನು ಧರಿಸಿ ಸದನವನ್ನು ಪ್ರವೇಶಿಸಿದರು.

Also Read  ರಾಜ್ಯಗಳ SC, ST ಒಳ ಮೀಸಲಾತಿಗೆ ಅಸ್ತು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

error: Content is protected !!
Scroll to Top