(ನ್ಯೂಸ್ ಕಡಬ)newskadaba.com ಮಣಿಪಾಲ, ಆ.10. ಕರ್ನಾಟಕ ರಾಜ್ಯದ ಮುಖ್ಯ ಮಂತ್ರಿಗಳು ಇತ್ತೀಚೆಗೆ ಉಡುಪಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಣಿಪಾಲದಲ್ಲಿ ನಡೆಯುವ ಅಕ್ರಮ ಪಬ್ ಮತ್ತು ಗಾಂಜಾ ವ್ಯವಹಾರದ ಬಗ್ಗೆ ಗಮನ ಸೆಳೆಯುವ ಒಂದು ಮನವಿಯನ್ನು ಉಡುಪಿ ಕಾಂಗ್ರೆಸ್ ಪಕ್ಷದ ನಿಯೋಗದಿಂದ ನೀಡಲಾಯಿತು.
ಮುಂದುದರಿದ ಹಂತವಾಗಿ ಮಣಿಪಾಲ ಪೊಲೀಸ್ ಸ್ಟೇಶನ್ ನ ಇನ್ಸ್ಪೆಕ್ಟರ್ ಶ್ರೀ ದೇವರಾಜ್ ಮತ್ತು ಸಬ್ ಇನ್ಸ್ಪೆಕ್ಟರ್ ಶ್ರೀ ಅಬ್ದುಲ್ ಖಾದರ್ ಅವರನ್ನು ಕಾಂಗ್ರೆಸ್ ಪಕ್ಷದ ನಿಯೋಗ ಭೇಟಿಯಾಗಿ ಮಣಿಪಾಲದಲ್ಲಿ ಪಬ್ ಮತ್ತು ಗಾಂಜಾ ವಿಚಾರದಲ್ಲಿ ನಡೆಯುವ ವ್ಯವಹಾರ ಮತ್ತು ನಿಯಮ ಮೀರಿ ಮಧ್ಯರಾತ್ರಿ ನಂತರ ಕೂಡ ನಡೆಯುತ್ತಿರುವ ವಿಧ್ಯಾರ್ಥಿಗಳ ಮತ್ತು ಹೊರಗಿನಿಂದ ಬಂದ ಯುವಕರ ಅಕ್ರಮ ಚಟುವಟಿಕೆಗಳಿಗೆ ಬೆಂಬಲ ನೀಡುವ ಯಾವುದೇ ಶಕ್ತಿ ಇರಬಹುದು ಅದನ್ನು ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಯಿತು. ಯುವ ಸಮಾಜವು ಜಾಗೃತರಾಗಿ ಸಮಾಜದ ಸುಧಾರಣೆಗೆ ಮುಂದಾಗಬೇಕು ಎಂಬ ವಿಧಾರ ಕೇಳಿಬರುತ್ತಿರುವ ಸಮಯದಲ್ಲಿ ವಿಧ್ಯಾರ್ಥಿಗಳು ಗಾಂಜಾ ಮತ್ತು ಮಾದಕ ವಸ್ತುಗಳಿಗೆ ಬಲಿಯಾಗುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ ಎಂಬುದು ತೀವ್ರ ಕಳವಳಕಾರಿ ವಿಚಾರ ಎಂದು ವರದಿಯಾಗಿದೆ.